ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!
ಯಾದಗಿರಿ: ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕಾಡನ್ನು ಕಾಯೋದು ಬಿಡಿ, ತಮ್ಮ ಕಚೇರಿಯನ್ನೇ ಕಾಯದ ಪರಿಸ್ಥಿತಿ ಯಾದಗಿರಿಯಲ್ಲಿ ಕಂಡುಬಂದಿದೆ. ಹೌದು. ಯಾದಗಿರಿಯ ಅರಣ್ಯ ಇಲಾಖೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಅರಣ್ಯ ಪ್ರದೇಶದಲ್ಲಿ ಖದೀಮರು ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಜಪ್ತಿ ಮಾಡಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಅದೇ ಕಚೇರಿಯಿಂದಲೇ ಶ್ರೀಗಂಧ ಕಟ್ಟಿಗೆ ಕಳ್ಳತನವಾಗಿರೋದು ಇದೀಗ ಭಾರೀ ಅನುಮಾನ ಉಂಟು ಮಾಡಿದೆ. ಕಳೆದ ನಾಲ್ಕು ದಿನದ ಹಿಂದೆ ಯಾದಗಿರಿ ಜಿಲ್ಲಾ ಕೆಂದ್ರದ ಅರಣ್ಯ ಇಲಾಖೆಯ […]







































































































































































































































































































































































































































































































































































































































































































































































































































































































































































































































































































































