October 28, 2026
#ಬೆಂಗಳೂರು

ಬಂದ್‌ ಇದ್ದರೂ ಬಸ್ಸುಗಳು ರಸ್ತೆಯಲ್ಲಿ ಸಂಚರಿಸುತ್ತೆ


ಬೆಂಗಳೂರು: ನಾಳೆ ಕರ್ನಾಟಕ ಬಂದ್‌ ಇದ್ದರೂ ಬಸ್‌ಗಳ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

https://imasdk.googleapis.com/js/core/bridge3.592.0_en.html#goog_1328122465

ಮಾತನಾಡಿದ ಅವರು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಎಲ್ಲಾ ಭಾಗಕ್ಕೂ ಕಡಿಮೆ ಪ್ರಮಾಣದಲ್ಲಿ ಬಸ್ ಸಂಚಾರ ಇರಲಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದರು.


ಬಂದ್ ಮಾಡುವವರು ಶಾಂತಿಯುತವಾಗಿ ಬಂದ್ ಮಾಡಲಿ. ಇವತ್ತಿನ ಕಾವೇರಿ ಸಮಸ್ಯೆಗೆ (Cauvery Problem) ಬಿಜೆಪಿಯೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಬಿಎಂಟಿಸಿ ನೌಕರರ ಸಂಘ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಬೆಂಗಳೂರು ಬಂದ್‌ಗೆ ಬೆಂಬಲ ಕೊಟ್ಟಿದ್ದರೈ ಬಿಎಂಟಿಸಿ ರಸ್ತೆಗೆ ಇಳಿದಿದ್ದವು. ಹೀಗಾಗಿ ಗೊಂದಲ ಆಗದೇ ಇರಲು ನೈತಿಕ ಬೆಂಬಲ ನೀಡಲು ಸಂಘ ಮುಂದಾಗಿದೆ.

Leave a comment

Your email address will not be published. Required fields are marked *