ತಮಿಳುನಾಡು ಸಿಎಂ ಆಗಿ ಅಣ್ಣಾಮಲೈಪ್ರಮಾಣವಚನ ಸ್ವೀಕರಿಸ್ತಾರೆ: ವಿನಯ್ ಗುರೂಜಿ
ಚಿಕ್ಕಮಗಳೂರು:
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಚಿಕ್ಕಮಗಳೂರು ಕಾರಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ನಾನು ನೋಡ್ತೀನಿ, ನೀವು ನೋಡ್ತೀರಾ. ಅಣ್ಣಾಮಲೈ ಎಸ್‌ಪಿ ಆಗಿದ್ದಾಗ ಬಂದಾಗಲೇ ೨ ಸೇಬು ಕೊಟ್ಟು ಹೇಳಿದ್ದೆ. ಖಾಕಿಯಿಂದ ಖಾದಿ ಉಡ್ತಾರೆ ಎಂದು ಹೇಳಿದ್ದೆ. ಅದು ನಿಜವಾಗುತ್ತದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ಮೊನ್ನೆಯಷ್ಟೆ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಮುಗಿದಿದೆ. ಸದ್ಯದಲ್ಲೇ ಮೋದಿಯ ಪಟ್ಟಾಭಿಷೇಕವನ್ನೂ ಎಲ್ಲರೂ ನೋಡ್ತೀವಿ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ಸಂಪುಟ ಸಚಿವರ ಜೊತೆಗೆ ಡಿನ್ನರ್ ಮೀಟಿಂಗ್ ನಡೆಸಿದರು. ಈ ವಿಶೇಷ ಭೋಜನಕೂಡದಲ್ಲಿ ಬಹುತೇಕ ಎಲ್ಲಾ ಸಚಿವರು ಭಾಗವಹಿಸಿದ್ದರು. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.













































































































































































































































































































































































































































































































































































































































































































































































































































































































































































































































































































































