ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ
ಹಾವೇರಿ:
ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬಂದಿದೆ. ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಗಾಸಿ ಗೊಳಿಸಿ ಗ್ಯಾಂಗ್ ರೇಫ್ ಮಾಡಲು ವಿಫಲ ಯತ್ನ ನಡೆಸಿದ ಘಟನೆ ಎರಡು ದಿನದ ನಂತರ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬAಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮತ್ತೊಂದೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಹಾವೇರಿಯಲ್ಲಿ ನೈತಕ ಪೊಲೀಸ್ ಗಿರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜ.೦೮ರಂದು ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿರುತ್ತಾರೆ. ಇದನ್ನು ಕಂಡ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂದಲೇ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈಗಾ ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ.
ಈ ದುರುಳರು ಮುಸ್ಲಿಂ ಮಹಿಳೆಯರು, ಹುಡುಗಿಯರನ್ನ ಟಾರ್ಗೆಟ್ ಮಾಡಿಕೊಂಡಿದ್ದರು. ಹಿಂದೂ ಹುಡಗರ ಜೊತೆ ಕಾಣಿಸಿಕೊಂಡ ಮುಸ್ಲಿಂ ಹುಡುಗಿಯರು, ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದರು. ಜೋಡಿ ಹಕ್ಕಿಗಳ ಮೇಲೆ ಅಟ್ಯಾಕ್ ಮಾಡಿ ಹುಡುಗಿಯರನ್ನ ಎಳೆದೊಯ್ಯುತ್ತಿದ್ದರು. ಇದೀಗ ಎರಡನೇ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಜನರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಇನ್ನು ಮತ್ತೊಂದೆಡೆ ವಿಡಿಯೋ ವೈರಲ್ ಬೆನ್ನಲೇ ಸಿರ್ಸಿ ಮೂಲದ ಮಹಿಳೆ ಹಾನಗಲ್ ಪೋಲಿಸ್ ಠಾಣೆಗೆ ಕುಟುಂಬ ಸಮೇತ ಹಾಜರಾಗಿದ್ದರು. ನನ್ನ ಮೇಲೆ ಹಲ್ಲೆ ಆಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಸಂತ್ರಸ್ತೆಯ ಗಂಡ ಬೇರೆನೇ ಹೇಳುತ್ತಿದ್ದಾನೆ ನನ್ನ ಹೆಂಡತಿಯ ಮೇಲೆ ನೈತಿಕ ಪೊಲೀಸ್ ಗಿರಿ ಜೊತೆಗೆ ಗ್ಯಾಂಗ್ ರೇಫ್ ಆಗಿದೆ ಎಂದು ಆರೋಪ ಮಾಡುತ್ತಿದ್ದಾನೆ.
ಈ ಪ್ರಕರಣದ ಕುರಿತು ಸ್ವತಃ ಸಂತ್ರಸ್ತೆ ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿ ನನಗೆ ಐದಾರು ಅಪರಿಚಿತ ಯುವಕರು ನಾನು ತಂಗಿದ್ದ ಹೋಟೆಲ್ ಗೆ ನುಗ್ಗಿ ಹಲ್ಲೆ ಮಾಡಿ ನನ್ನ ಖಾಸಗಿ ಅಂಗಾAಗಗಳನ್ನು ಘಾಸಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನನ್ನ ಮೇಲೆ ಗ್ಯಾಂಗ್ ರೇಫ್ ಆಗಿದೆ ಎಂದು ಆಕೆ ಹೇಳಿಲ್ಲ.
ಇನ್ನೂ ಪ್ರಖರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ಎಸ್. ಪಿ ಅಂಶುಕುಮಾರ್ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೆವೆ. ಮಹಿಳೆ ಎಲ್ಲೂ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಹೇಳಿಲ್ಲ. ವೈಧ್ಯಕೀಯ ತಪಾಸಣೆ ಮಾಡಿಸಿದ್ದೆವೆ. ಮಹಿಳೆಯ ದೂರಿನ ಮೇರಿಗೆ ತನಿಖೆ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.














































































































































































































































































































































































































































































































































































































































































































































































































































































































































































































































































































































