July 29, 2026
#ಜಿಲ್ಲೆ

ಜಾತ್ರೆ ವೇಳೆ ಕುಡಿದು ರಂಪಾಟಮೂವರಿಗೆ ಸ್ಟೀಲ್ ಕಟರ್‌ನಿಂದ ಇರಿತ

ಚಿತ್ರದುರ್ಗ:
ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂವರ ಮೇಲೆ ಸ್ಟೀಲ್ ಕಟರ್‌ನಿಂದ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಉಡುಸಲಮ್ಮ ದೇವಿಯ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಬೇರೆ ಬೇರೆ ಕಡೆಯಿಂದ ಗ್ರಾಮಕ್ಕೆ ಜನ ಬಂದಿದ್ದರು. ಇದೇ ವೇಳೆ ವಿರೇಶ್ ಎಂಬಾತ ಕುಡಿದು ಗಲಾಟೆ ಆರಂಭಿಸಿದ್ದಾನೆ. ಬಳಿಕ ದೇವಾಲಯದ ಬಳಿ ಇದ್ದ ಮೂವರು ಅದೇ ಗ್ರಾಮದ ಯುವಕರಿಗೆ ಸ್ಟೀಲ್ ಇರಿದಿದ್ದಾನೆ.
ಗ್ರಾಮದ ಪವನ್, ಮಾರುತಿ ಹಾಗೂ ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದಿನಿAದಲೂ ವೀರೇಶ್ ಹಾಗೂ ಹಲ್ಲೆಗೊಳಗಾದ ಮೂವರು ಯುವಕರ ನಡುವೆ ಜಾತಿ ವೈಷಮ್ಯ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸ್ಟೀಲ್ ಕಟರ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬAಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Leave a comment

Your email address will not be published. Required fields are marked *