September 14, 2026
#ಬೆಂಗಳೂರು

ಕಲ್ಲಿದ್ದಲು ಅನೀಲಿಕರಣ ಯೋಜನೆಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ

ಬೆಂಗಳೂರು:
ಕಲ್ಲಿದ್ದಲು ಅನಿಲೀಕರಣ ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದಿಡಲಾಗುವುದು. ನಂತರ ಔಪಚಾರಿಕವಾಗಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭೂಗತ ಕಲ್ಲಿದ್ದಲು ಅನೀಲಿಕರಣ ಯೋಜನೆಗೆ ಶೇ.೫೦ ರಷ್ಟು ರಿಯಾಯಿತಿ ನೀಡಲಾಗುವುದು. ವಾಣಿಜ್ಯ ಗಣಿಗಳಲ್ಲಿ ಭೂಗತ ಗಣಿಗಾರಿಕೆ ಮಾಡುವವರಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳೊಂದಿಗೆ ಆದಾಯ ಹಂಚಿಕೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತದೆ ಎಂದಿದ್ದಾರೆ.
ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮೂಲಕ ಭೂಗತ ಗಣಿಗಾರಿಕೆಗೆ ಪ್ರವೇಶಿಸುವವರಿಗೆ ಈ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಮೇಲ್ಮೈ ಗಣಿಗಾರಿಕೆಗೆ ಹೋಲಿಸಿದರೆ ಭೂಗತ ಗಣಿಗಾರಿಕೆ ಕಡಿಮೆ ಮಾಲಿನ್ಯಕಾರಕವಾಗಿದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಈ ಸಬ್ಸಿಡಿ (ಸಹಾಯಧನ) ಹೆಚ್ಚಿಸಲೂ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಹೊಂದಲು ಯೋಜಿಸಲಾಗಿದೆ. ಭಾರತವು ಪ್ರಸ್ತುತ ತೆರೆದ ಗಣಿಗಾರಿಕೆ ವಿಧಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭೂಗತ ಗಣಿಗಾರಿಕೆ ಪ್ರಸ್ತುತ ಭಾರತದ ಒಟ್ಟು ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆಯಲ್ಲಿ ಕೇವಲ 4 ಪ್ರತಿಶತದಷ್ಟಿದ್ದು ಇದನ್ನು ಹೆಚ್ಚಿಸಲು ಯೋಜಿಸಲಾಗುತ್ತಿದೆ.
ಮೇಲ್ಮೈ ಕಲ್ಲಿದ್ದಲು ಗಣಿಗಾರಿಕೆ ವಿಧಾನದಲ್ಲಿ ಉತ್ತಮ ಗುಣಮಟ್ಟದ ಹಾಗೂ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹೊರ ತೆಗೆಯಲಿದ್ದು, ಅಷ್ಟೇ ಅನಾನುಕೂಲತೆ ಸಹ ಹೊಂದಿದೆ. ಅತಿಯಾದ ಹೊರತೆಗೆಯುವಿಕೆಯಿಂದಾಗಿ ಹೆಚ್ಚಿನ ಮಾಲಿನ್ಯ, ಪುನರ್ವಸತಿ ಮತ್ತು ಭೂ ಸ್ವಾಧೀನದ ವೆಚ್ಚಗಳು ಹಾಗೂ ಅರಣ್ಯದ ಸ್ಥಳಾಂತರ ಸಮಸ್ಯೆಗಳು ಅಧಿಕವಾಗಿವೆ ಎಂದು ಸಚಿವ ಜೋಶಿ ವಿವರಿಸಿದ್ದಾರೆ.
ದೇಶದ ಅತಿದೊಡ್ಡ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆ ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಭೂಗತ ಗಣಿಗಾರಿಕೆ ಉತ್ಪಾದನೆಯನ್ನು ೨೦೩೦ರ ವೇಳೆಗೆ 100 ಮಿಲಿಯನ್ ಟನ್‌ಗಳಿಗೆ 4 ಪಟ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕಲ್ಲಿದ್ದಲು ಅನಿಲೀಕರಣಕ್ಕಾಗಿ, ಅನಿಯಂತ್ರಿತ ವಲಯಕ್ಕೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗಾಗಿ ಹೊಸ ಉಪವಿಭಾಗವನ್ನು ಸರ್ಕಾರ ಸೇರಿಸಿದೆ. ಭಾರೀ ಗಣಿಗಾರಿಕೆ ಉಪಕರಣಗಳಿಗೆ ಯಾವುದೇ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹವನ್ನು ಯೋಜಿಸಿಲ್ಲ. ಭಾರೀ ಗಣಿಗಾರಿಕೆ ಮತ್ತು ನಿರ್ಮಾಣ ಉಪಕರಣಗಳ ಉತ್ಪಾದನೆಗೆ ಪಿಎಲ್‌ಐ ನೀಡಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ. ನಮ್ಮ PSU ಗಳಿಗೆ ಮತ್ತು ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಭಾಗವಹಿಸುವ ಖಾಸಗಿ ಕಂಪನಿಗಳಿಗೆ ಖನಿಜ ಹರಾಜಿನಲ್ಲಿ ಖರೀದಿಸಲು ಹೇಳುತ್ತಿದ್ದೇವೆ ಎಂದಿದ್ದಾರೆ.
ಎನ್‌ಎಲ್‌ಸಿ ಇಂಡಿಯಾ ಮತ್ತು ಕೋಲ್ ಇಂಡಿಯಾದ ಮಾಲೀಕತ್ವವನ್ನು ಸರ್ಕಾರ ಯಾವಾಗಲೂ ಉಳಿಸಿಕೊಳ್ಳುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
**

Leave a comment

Your email address will not be published. Required fields are marked *