July 29, 2026
#ಜಿಲ್ಲೆ

ಶಾಸಕ ಬಿ.ಆರ್ ಪಾಟೀಲ್ ಆಪ್ತ ಬಸವರಾಜ್ ಚೌಲ್ ಪುತ್ರನ ಹತ್ಯೆ

ಕಲಬುರಗಿ: ಶಾಸಕ ಬಿ.ಆರ್ ಪಾಟೀಲ್ ಆಪ್ತರೂ ಆಗಿರುವ ಕಾಂಗ್ರೆಸ್‌ ಮುಖಂಡ ಬಸವರಾಜ್ ಚೌಲ್ ಪುತ್ರನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

https://imasdk.googleapis.com/js/core/bridge3.609.1_en.html#goog_1851773193

ಜಿಲ್ಲೆಯ ಆಳಂದ (Aland) ಪಟ್ಟಣದ ಹೊರವಲಯದ ಜಿಡಗಾ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡನ ಪುತ್ರ ಚಂದ್ರಶೇಖರ್ ಚೌಲ್ (21) ಹತ್ಯೆಗೀಡಾಗಿದ್ದಾನೆ. 

ಚಂದ್ರಶೇಖರ್ ಚೌಲ್ ಸ್ನೇಹಿತರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಳಂದ ಪಟ್ಟಣದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a comment

Your email address will not be published. Required fields are marked *