ಸ್ಪಿನ್ ಪಿಚ್‌ನಲ್ಲಿ ತಿಣುಕಾಡಿದ ಆಸೀಸ್ – ಭಾರತಕ್ಕೆ 200 ರನ್‌ಗಳ ಗುರಿ
ಚೆನ್ಹೈ: ಚೆಪಾಕ್‌ನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ 200 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ಸ್ಪಿನ್ ಪಿಚ್‌ನಲ್ಲಿ ರನ್ ಕದಿಯಲು ತಿಣುಕಾಡಿತು. ಭಾರತದ ಸ್ಪಿನ್ ಮಾಂತ್ರಿಕರ ದಾಳಿ ಹೊರತಾಗಿಯೂ 199 ರನ್ ಗಳಿಸಿ, ಟೀಂ ಇಂಡಿಯಾಕ್ಕೆ 200 ರನ್‌ಗಳ ಗುರಿ ನೀಡಿತು.
ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಮಚೆಲ್ ಮಾರ್ಷ್ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. 2.2 ಓವರ್‌ನಲ್ಲೇ 5 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಆಸೀಸ್ ಸಂಕಷ್ಟಕ್ಕೀಡಾಯಿತು. ಈ ವೇಳೆ 2ನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೋಡಿ, 85 ಎಸೆತಗಳಲ್ಲಿ 69 ರನ್ ಹಾಗೂ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಜೋಡಿ 64 ಎಸೆತಗಳಲ್ಲಿ 36 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿತ್ತು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಆಸೀಸ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಸೀಸ್ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಸರ್ವಪತನ ಕಂಡಿತು.
ಆಸೀಸ್ ಪರ ಡೇವಿಡ್ ವಾರ್ನರ್ 41 ರನ್ (52 ಎಸೆತ, 6 ಬೌಂಡರಿ), ಸ್ಟೀವ್ ಸ್ಮಿತ್ 46 ರನ್ (71 ಎಸೆತ 5 ಬೌಂಡರಿ), ಮಾರ್ನಸ್ ಲಾಬುಶೇನ್ 27 ರನ್, ಗ್ಲೇನ್ ಮ್ಯಾಕ್ಸ್‌ವೆಲ್ 15 ರನ್, ಕ್ಯಾಮರೂನ್ ಗ್ರೀನ್ 8 ರನ್, ಪ್ಯಾಟ್ ಕಮ್ಮಿನ್ಸ್ 15 ರನ್, ಮಿಚೆಲ್ ಸ್ಟಾರ್ಕ್ 28 ರನ್, ಆಡಂ ಝಂಪಾ 6 ರನ್, ಜೋಶ್ ಹ್ಯಾಜಲ್‌ವುಡ್ 1 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರೆ, ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಶೂನ್ಯಕ್ಕೆ ನಿರ್ಗಮಿಸಿದರು.
ಜಡೇಜಾ ಸ್ಪಿನ್ ಜಾದು: ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.













































































































































































































































































































































































































































































































































































































































































































































































































































































































































































































































































































































