July 29, 2026
#Uncategorized

ಮೋದಿಯೇ ನಮ್ಮ ದೇವರು: ಪ್ರತಾಪ್ ಸಿಂಹ

ಮೈಸೂರು: ನಾವೆಲ್ಲ ಗೆಲ್ಲುವುದೇ ಮೋದಿ ಹೆಸರಿಂದ ಆಗಿದ್ದು, ಹೀಗಾಗಿ ಮೋದಿಯೇ ನಮ್ಮ ದೇವರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಆಗಬೇಕು.?, ಯಾವಾಗ ಮಾಡಬೇಕು.? ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತೆ. ಅದನ್ನು ಹೇಳಲು, ನಾನು ಬಹಳ ಜ್ಯೂನಿಯರ್. ನಾನು ಪಕ್ಷಕ್ಕೆ ಬಂದು ಈಗ 10 ವರ್ಷ ಆಗುತ್ತಿದೆ ಅಷ್ಟೇ ಎಂದರು.

ನಾನು ಪಕ್ಷದ ನೇಮಕದ ವಿಚಾರದಲ್ಲಿ ಹೇಳಲು ಆಗುವುದಿಲ್ಲ. ಪಕ್ಷದ ಕಾರ್ಯಕರ್ತರು ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಶೋಭಾ ಕರಂದ್ಲಾಜೆ ಅವರನ್ನು ಕರೆಯುತ್ತಿದ್ದರು. ಹೀಗಾಗಿ ನಾನು ಅದೇ ದಾಟಿಯಲ್ಲೇ ಶುಭಾಶಯ ಕೋರಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. 

ನಾವೆಲ್ಲ ಗೆಲ್ಲುವುದು ಮೋದಿ ಅವರ ಹೆಸರಿನಿಂದ, ಮೋದಿ ನಮ್ಮ ದೇವರು. ಲೋಕಸಭಾ ಚುನಾವಣೆಗೂ ರಾಜ್ಯಾಧ್ಯಕ್ಷರ ನೇಮಕಕ್ಕೂ ಸಂಬಂಧ ಇರುವುದಿಲ್ಲ. ಬಿಜೆಪಿ ಸಂಘಟನೆ ದೃಷ್ಟಿಯಿಂದ ಅಷ್ಟೇ ರಾಜ್ಯಾಧ್ಯಕ್ಷರು ಆಗಬೇಕು. ಲೋಕಸಭಾ ಚುನಾವಣೆ ಮೋದಿ ಅವರ ಹೆಸರಿನಲ್ಲೇ ನಡೆಯುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

Leave a comment

Your email address will not be published. Required fields are marked *