May 30, 2026
#ಜಿಲ್ಲೆ

ಭೇಟಿಗೆ ಬರುವವರು ಹಾರ, ಪೇಟ ತರಬೇಡಿ, ನೋಟ್ ಬುಕ್ಸ್ ತನ್ನಿ


ಮೈಸೂರು: ತಮ್ಮನ್ನು ಭೇಟಿ ಮಾಡಲು ಬರುವಾಗ ಹಾರ ಹಾಗೂ ಪೇಟಗಳನ್ನು ತರಬೇಡಿ. ಅದರ ಬದಲು 200 ಪುಟಗಳ ನೋಟ್ ಬುಕ್ ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಮನವಿ ಮಾಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಪೇಟ ಹಾಗೂ ಶಾಲಿಗೆ ದುಂದು ವೆಚ್ಚ ಮಾಡಬೇಡಿ. ಅದೇ ಹಣದಲ್ಲಿ ನೋಟ್ ಬುಕ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ. ಬಳಿಕ ಈ ಪುಸ್ತಕಗಳನ್ನು ಹಾಗೂ ಸಾಮಗ್ರಿಗಳನ್ನು ಮಕ್ಕಳಿಗೆ ಹಂಚಲಾಗುವುದು ಎಂದು ಬರೆದುಕೊಂಡಿದ್ದಾರೆ. 

ಈ ಮೂಲಕ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಸಚಿವ ಮಹದೇವಪ್ಪ ಮನವಿ ಮಾಡಿದ್ದಾರೆ. ಇದರಿಂದಾಗಿ ನೂತನ ಬದಲಾವಣೆಗೆ ಸಚಿವರು ಮುಂದಾಗಿದ್ದಾರೆ. ಅಲ್ಲದೇ ತಮಗೆ ನೀಡುವ ಶಿಕ್ಷಣ ಸಾಮಾಗ್ರಿಗಳನ್ನು ಶಾಲಾ ಮಕ್ಕಳಿಗೆ ನೀಡುವ ಭರವಸೆ ನೀಡಿದ್ದಾರೆ. ಸಚಿವರ ಈ ನಡೆಯಿಂದ ಉಳಿದವರಿಗೂ ಮಾದರಿಯಾಗಿದ್ದಾರೆ. 

Leave a comment

Your email address will not be published. Required fields are marked *