July 28, 2026
#ಬೆಂಗಳೂರು

ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಸಿಎಂ ರಾಮ ಜಪ

ಬೆಂಗಳೂರು:
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ಕೊಡಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ಜಪ ಮಾಡಲು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟಿಸಿದ್ದ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇಲ್ಲಿಂದ ಆರಂಭವಾದ ಸಿದ್ದರಾಮಯ್ಯ ಅವರ ಶ್ರೀರಾಮ ಜಪ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಮುಂದುವರಿದಿದೆ.
ಗಾAಧಿ ಪುಣ್ಯಸ್ಮರಣೆ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶ್ರೀರಾಮ ಚಂದ್ರರ ಆದರ್ಶವನ್ನು ಸ್ಮರಿಸಿದರು. ಮಹಾತ್ಮ ಗಾಂಧೀಜಿ ಸಾಯುವಾಗ ಹೇ ರಾಮ್ ಅಂತ ಉಚ್ಚಾರ ಮಾಡಿ ಪ್ರಾಣ ತ್ಯಾಗ ಮಾಡಿದ್ದರು. ಶ್ರೀ ರಾಮಚಂದ್ರನ ಬಗ್ಗೆ ಅಪಾರವಾದ ಭಕ್ತಿ, ನಂಬಿಕೆ ಇಟ್ಟಿದ್ದರು. ಅದಕ್ಕೆ ಅವರು ಯಾವತ್ತೂ ರಘು ಪತಿ ರಾಘವ ರಾಜಾ ರಾಂ ಪತೀತ ಪಾವನ ಸೀತಾ ರಾಂ ಅಂತಿದ್ದರು. ನಾವೂ ಅದನ್ನು ಪ್ರತಿ ಕಾರ್ಯಕ್ರಮಗಲ್ಲೂ ಹೇಳುತ್ತೇವೆ ಎಂದರು.
ಶ್ರೀರಾಮ ಚಂದ್ರ ದಶರಥರಾಜ ಹಾಗೂ ಕೌಶಲ್ಯ ದೇವಿಯ ಮಗ ಆಗಿದ್ದಾರೆ. ದಶರಥ ಮಹಾರಾಜರಿಗೆ ಮೂರು ಜನ ಹೆಂಡತಿಯರು. ಮೂವರ ಪೈಕಿ ಕೌಶಲ್ಯ ದೇವಿಯ ಮಗ ಶ್ರೀರಾಮಚಂದ್ರ. ಶ್ರೀರಾಮಚಂದ್ರ ಪಿತೃ ವಾಕ್ಯ ಪರಿಪಾಲನೆಗಾಗಿ ರಾಜ್ಯಭಸರ ತ್ಯಾಗ ಮಾಡಿ ಸಹೋದರ ಭರತನಿಗೆ ಪಟ್ಟ ಕಟ್ಟಿ ಕಾಡಿಗೆ ಹೋಗುತ್ತಾರೆ. ಪತ್ನಿ ಸೀತೆ, ಸಹೋದರ ಲಕ್ಷ್ಮಣ ಜೊತೆ ಕಾಡಿಗೆ ಹೋಗುತ್ತಾರೆ. ೧೪ ವರ್ಷ ವನವಾಸ ಮಾಡುತ್ತಾರೆ ಎಂದರು.
ಶ್ರೀರಾಮ ಅಂದರೆ ಸತ್ಯ ಪರಿಪಾಲನೆ ಮಾಡುವವರು. ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಾಮಾನವಾಗಿ ಕಾಣುತ್ತಿದ್ದರು. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾವು ದೇಶ, ಕರ್ನಾಟಕ ರಾಮ ರಾಜ್ಯ ಆಗಬೇಕು ಅಂತೇವೆ. ಅಷ್ಟರಮಟ್ಟಿಗೆ ಆದರ್ಶ ರಾಜ್ಯವನ್ನು ಶ್ರೀರಾಮಚಂದ್ರ ಕೊಡುತ್ತಿದ್ದರು ಎಂದರು.
ಅAತ ವ್ಯಕ್ತಿಯ ಆದರ್ಶವನ್ನು ಪ್ರತಿಪಾದಿಸುತ್ತಿದ್ದ ಗಾಂಧಿಯನ್ನು ಒಬ್ಬ ಮತಾಂಧ ಕೊಂದು ಹಾಕುತ್ತಾನೆ. ನಾನು ರಾಜಕೀಯ ಮಾತನಾಡಲ್ಲ, ಅದರ ಅಗತ್ಯ ಇಲ್ಲ. ಗಾಂಧಿ ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನೂ ಮನುಷ್ಯರಾಗಿ ಕಾಣುತ್ತಿದ್ದರು. ಮನುಷ್ಯ ಮನುಷ್ಯ ನಡುವೆ ಪ್ರೀತಿ ಇರಬೇಕೇ ಹೊರತು ದ್ವೇಷ ಇರಬಾರದು ಎಂದರು.
ಬೆAಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ ೩೩ ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.
ಜೈ ಶ್ರೀರಾಮ್ ಅಂತ ನಾವೂ ಹೇಳೋಲ್ವಾ? ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ, ನಾನೂ ಹೇಳುತ್ತೇನೆ. ಕೆಲವರು ಜೈ ಶ್ರೀರಾಮ್ ಸ್ಲೋಗನ್ ತಮ್ಮ ಸ್ವತ್ತು ಅಂದುಕೊAಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಹೇಳಿ ಎಂದಿದ್ದರು. ಬಳಿಕ ಮೈಸೂರು ಪ್ರವಾಸದಲ್ಲಿರುವ ವೇಳೆಯಲ್ಲೂ ರಾಮ ಜಪ ಮಾಡಿದ್ದರು. ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್ ಬಿಜೆಪಿ ಆಸ್ತಿಯಲ್ಲ ಎಂದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಹೇಳಿದ್ದರು.

Leave a comment

Your email address will not be published. Required fields are marked *