July 29, 2026
#ಚಲನಚಿತ್ರ

‘ಬೇಬಿ’ ಹುಡುಗಿಗೆ ಬಂಪರ್ ಆಫರ್

ಬೇಬಿ ಸಿನಿಮಾದ ಮೂಲಕ ಚಿತ್ರ ಜಗತ್ತಿನ ಡಾರ್ಲಿಂಗ್ ಆಗಿರುವ ವೈಷ್ಣವಿ ಇದೀಗ ಏಕಕಾಲಕ್ಕೆ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದಲ್ಲಿ ಇದು ಚರ್ಚೆಗೂ ಕಾರಣವಾಗಿದೆ. ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಮೂರು ಚಿತ್ರಗಳಿಗೆ ವೈಷ್ಣವಿ ನಾಯಕಿ ಎಂದು ಹೇಳಲಾಗುತ್ತಿದೆ.
ಬೇಬಿ ಸಿನಿಮಾದ ಯಶಸ್ಸಿನ ನಂತರ ಇವರಿಗೆ ಸಾಕಷ್ಟು ಆಫರ್ಸ್ ಬಂದವು. ಆದರೆ, ಅವರು ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದೇ ಕುತೂಹಲವಾಗಿತ್ತು. ಈಗ ಕುತೂಹಲಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ವೈಷ್ಣವಿ. ಬೇಬಿ ನಂತರ ಲವ್ ಮಿ ಚಿತ್ರಕ್ಕೆ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಿಲ್ ರಾಜು ಸೋದರಳಿಯ ಆಶಿಶ್ ರೆಡ್ಡಿ ಈ ಸಿನಿಮಾದ ನಾಯಕನಾಗಿದ್ದು, ನಾಯಕಿಯಾಗಿ ವೈಷ್ಣವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಇದೊಂದು ಹಾರಾರ್ ಮತ್ತು ಕಾಮಿಡಿ ಸಿನಿಮಾವಾಗಿದೆಯಂತೆ. ಈ ಚಿತ್ರದ ನಂತರ ದಿಲ್ ರಾಜು ಅವರು ಇನ್ನೂ ಎರಡು ಚಿತ್ರಗಳಿಗೆ ವೈಷ್ಣವಿ ನಾಯಕಿ ಎನ್ನಲಾಗುತ್ತಿದೆ.

Leave a comment

Your email address will not be published. Required fields are marked *