July 29, 2026
#ಬೆಂಗಳೂರು

40 ಸಾವಿರ ಕೋಟಿ ರೂ. ಅಕ್ರಮವೆಂದ್ರೆ ನಂಬಲು ಸಾಧ್ಯವೇ?

ಬೆಂಗಳೂರು:
ನಾವು ಈಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. 40 ಸಾವಿರ ಕೋಟಿ ರೂ. ಅವ್ಯವಹಾರ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು. ಇದನ್ನು ಯಾರಾದರೂ ನಂಬುವುದಕ್ಕೆ ಆಗುತ್ತಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಅಕ್ರಮ ನಡೆದೇ ಇಲ್ಲ ಅಂತಾ ಹೇಳುವುದಿಲ್ಲ. ೪೦ ಸಾವಿರ ಕೋಟಿ ರೂ. ಅಕ್ರಮ ಅಂದರೆ ನಂಬಲು ಸಾಧ್ಯವೇ ಎಂದಿದ್ದಾರೆ.
ಎಷ್ಟು ಅಕ್ರಮ ಆಗಿದೆ ಅಂತಾ ನನಗೆ ಗೊತ್ತಿಲ್ಲ. ಯತ್ನಾಳ್ ಆರೋಪದ ಬಗ್ಗೆ ವಾಸ್ತವಾಂಶ ಪರಿಶೀಲನೆ ಮಾಡಬೇಕಲ್ವಾ? ಶಾಸಕ ಯತ್ನಾಳ್ ವಿರುದ್ಧದ ಕ್ರಮದ ಬಗ್ಗೆ ನಾನೇನು ಹೇಳುವುದಿಲ್ಲ. ಯತ್ನಾಳ್ ಹೇಳಿಕೆ ನಿಜಾಂಶವಲ್ಲ ಅದಕ್ಕೆ ಉತ್ತರಿಸಬೇಕಿಲ್ಲ ಅಂತಾ ಬಿಜೆಪಿ ನಾಯಕರು ಸುಮ್ಮನಾಗಿರಬಹುದು ಎಂದು ಹೇಳಿದ್ದಾರೆ.
ನಾನು ಯಾರನ್ನೂ ರಕ್ಷಣೆ ಮಾಡಲು ಹೇಳಿಕೆ ನೀಡುತ್ತಿಲ್ಲ. ಜಯಚಂದ್ರ ನೇತೃತ್ವದಲ್ಲಿ ವರದಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪ್ರತಿದಿನ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡುತ್ತಿದ್ದಾರಾ ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿಯಲ್ಲಿರುವ ಕೆಲವು ಭಿನ್ನಾಭಿಪ್ರಾಯ ಕಾರಣಕ್ಕೆ ಯತ್ನಾಳ್ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ.ಬಿಜೆಪಿ ಹಾಗೂ ಎನ್‌ಡಿಎ ಪರವಾಗಿ ಈಗ ನಾನೇ ಹೇಳುತ್ತಿದ್ದೇನೆ ಎಂದರು.
ಸAಕ್ರಾAತಿ ಹಬ್ಬದ ಬಳಿಕ ಸಂತೋಷವಾಗುವ ಸುದ್ದಿಯನ್ನೇ ಕೊಡುತ್ತೇನೆ. ಸೀಟು ಹಂಚಿಕೆ ಸೇರಿ ಎಲ್ಲದರ ಬಗ್ಗೆ ನಿಮಗೆಲ್ಲರಿಗೂ ಸಂತೋಷವಾಗುವ ಸುದ್ದಿಯನ್ನೇ ಕೊಡುತ್ತೇನೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಆದೇಶ ವಿಚಾರವಾಗಿ ಮಾತನಾಡಿದ ಅವರು, ಅವರನ್ನು ಸಂತುಷ್ಟಗೊಳಿಸಲು ಹೇಳಿದ್ದಾರೆಯೇ ಹೊರತು ಅವರ ಅಭಿವೃದ್ಧಿಗೋಸ್ಕರ ಅಲ್ಲ. ಯಾವಾಗ ಹಿಜಾಬ್ ವಾಪಸ್ ಹೇಳಿಕೆಗೆ ಟೀಕೆ ಶುರುವಾಯ್ತೋ ೨೪ ಗಂಟೆಯಲ್ಲಿ ಮಾತು ವಾಪಸ್ ಪಡೆದರು. ಮತಕ್ಕೋಸ್ಕರ, ಕೆಲವರನ್ನು ಖುಷಿಪಡಿಸಲು ತಾತ್ಕಾಲಿಕ ಘೋಷಣೆ ಮಾಡುತ್ತಾರೆ. ಇದು ಯಾವುದೂ ಅನುಷ್ಠಾನಕ್ಕೆ ಬರಲ್ಲ ಎಂದು ಕಿಡಿಕಾರಿದ್ದಾರೆ.
ಎಲ್ಲಿದೆ ಇವರ ಹತ್ತಿರ ದುಡ್ಡು? ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ. ಕೊಟ್ಟಾಯ್ತಾ ಇವರು? ಹಿಜಾಬ್ ವಿಷಯದಲ್ಲಿ ಆ ರೀತಿ ನಡೆದುಕೊಂಡವರು ನಮಗೆ ರಕ್ಷಣೆ ಕೊಡ್ತಾರಾ ಅಂತಾ ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ೧೦ ಸಾವಿರ ಕೋಟಿ ರೂ. ಕೊಡ್ತೀನಿ ಅಂತಾ ಹೇಳಿರುವುದು ಅವರ ಹಿಂದೆ ಇರುವವರ ಉದ್ದಾರಕ್ಕೆ ಎಂದಿದ್ದಾರೆ.

Leave a comment

Your email address will not be published. Required fields are marked *