July 29, 2026

ಹಿಂದೂ ಸಂಘಟನೆ ಅಧ್ಯಕ್ಷನ ಮೇಲೆ ರೌಡಿಶೀಟ್ ಕೇಸ್ ಓಪನ್!ಮಠಾಧೀಶರ ವ್ಯಾಪಕ ಆಕ್ರೋಶ

ಕಲಬುರಗಿ:ಜಿಲ್ಲಾ ಹಿಂದೂ ಜಾಗೃತಿ ಸೇನಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಎಂಬುವವರ ಮೇಲೆ ಕೇವಲ ಒಂದು ಕೇಸ್ ದಾಖಲಾಗಿರುವುದಕ್ಕೆ ಕಲಬುರಗಿ ನಗರದ ಆರ್.ಜೆ ನಗರ ಠಾಣೆಯಲ್ಲಿ ರೌಡಿಶೀಟರ್‌ಕೇಸ್ ದಾಖಲಿಸಲಾಗಿದೆ. ಇದು ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿವಿಧ ಮಠಾಧೀಶರು ಆಕ್ರೋಶ ಹೊರಹಾಕುತ್ತಿದ್ದಾರೆ.ಅಷ್ಟಕ್ಕೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ ಸಮಾಜದಲ್ಲಿ ಶಾಂತಿ ಕದಡಲು ಲಕ್ಷ್ಮಿಕಾಂತ್ ಯತ್ನಿಸಿದ್ದಾರೆಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇನ್ನೂ ಯಾವುದೇ […]

ಒಂದೇ ಕುಟುಂಬದ 4 ಕೊಲೆ ಕೇಸ್: ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ವಜಾ

ಉಡುಪಿ:ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿ ಆದೇಶ ಹೊರಡಿಸಿದೆ. ಆರೋಪಿ ಪ್ರವೀಣ್ ಚೌಗುಲೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಕೋರಿ ಡಿಸೆಂಬರ್ 14ರಂದು ವಕೀಲ ಕೆ.ಎಸ್.ಎನ್.ರಾಜೇಶ್ ಮೂಲಕ ಅರ್ಜಿ ಸಲ್ಲಿಸಿದ್ದ.ಜಾಮೀನಿಗೆ ಸರ್ಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಧೀಶ ದಿನೇಶ್ ಹೆಗ್ಡೆ ಆದೇಶ ಹೊರಡಿಸಿದೆ.ಒಂದೇ ಕಂಪನಿಯಲ್ಲಿ ಜೊತೆ ಜೊತೆಗೆ […]

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ

ಬಳ್ಳಾರಿ:ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ ಎನ್ನುವ ಮೂಲಕ ಖರ್ಗೆ ಪರ ಸಚಿವ ಬಿ. ನಾಗೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಮಾಡೋದು, ದಲಿತ ಪ್ರಧಾನಿ ಮಾಡೋದು ಇಂಡಿಯಾ ಒಕ್ಕೂಟದ ಉದ್ದೇಶ. ಹೀಗಾಗಿ ಒಕ್ಕೂಟದಿಂದ ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ಸ್ವಇಚ್ಛೆಯಿಂದ ಸಿದ್ದರಾಮಯ್ಯ ಅವರು ಹಾಗೆ ಹೇಳಿರಬಹುದು. ಅದು ಅವರ […]

ಶಿಕ್ಷಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ಕೊಲೆಗೈದು ಪರಾರಿಯಾಗಿದ್ದ ಆರೋಪಿ ಪೊಲೀಸರ ಅತಿಥಿ

ಧಾರವಾಡ:ಇಲ್ಲಿನ ಓಂನಗರದಲ್ಲಿ ಇತ್ತೀಚೆಗಷ್ಟೇ ನಿವೃತ್ತ ಶಿಕ್ಷಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.ಗಿರಿಜಾ ನಡೂರಮಠ (೬೩) ಎಂಬ ನಿವೃತ್ತ ಶಿಕ್ಷಕಿಯ ಶವ ಕೊಳೆತ ಸ್ಥಿತಿಯಲ್ಲಿ ಡಿ.೧೫ ರಂದು ಅವರ ಮನೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಸಹಜ ಸಾವು ಅಥವಾ ಆತ್ಮಹತ್ಯೆ ಇರಬಹುದು ಎಂದು ಎಲ್ಲರೂ ಊಹಿಸಿದ್ದರು. ಇದೀಗ ವಿದ್ಯಾಗಿರಿ ಠಾಣೆಯ ಪೊಲೀಸರು ಇದು ಕೊಲೆ ಎಂದು ಸಾಬೀತುಪಡಿಸಿದ್ದಾರೆ.ಗಿರಿಜಾ ಅವರೊಂದಿಗೆ ಅಮರಗೋಳದ ಮಂಜುನಾಥ ದಂಡಿನ ಎಂಬಾತ ಹಣದ ವ್ಯವಹಾರ ಇಟ್ಟುಕೊಂಡಿದ್ದ. ಅವರಿಗೆ ಸುಮಾರು ೧೦ ಲಕ್ಷ ರೂ. ಹಣ […]

‘ಸೆಲೆಬ್ರಿಟಿಸ್’ಗೆ ಧನ್ಯವಾದ ತಿಳಿಸಿದ ದರ್ಶನ್

ರಾಜ್ಯಾದ್ಯಂತ ಕಾಟೇರ ಸಿನಿಮಾದ ಅಬ್ಬರ ಜೋರಾಗಿದೆ. ಸಿನಿಮಾ, ನಟನೆ, ಸಂಭಾಷಣೆ, ನಿರ್ದೇಶನ ಹೀಗೆ ಎಲ್ಲದರಲ್ಲೂ ಸಿನಿಮಾ ಪಾಸ್ ಅನಿಸಿಕೊಂಡಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳು ಚಿತ್ರವನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಹಾಗಾಗಿ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎಂದು ಕರೆಯುವ ದರ್ಶನ್ ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ ಆಶೀರ್ವಾದಕ್ಕೆ ಕೊನೆಯೆಲ್ಲಿ. ಧನೋಸ್ಮಿ ಸೆಲೆಬ್ರಿಟಿಸ್. ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ಎಂದು ದರ್ಶನ್ ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ಜೀವಾಳದಂತಿರುವ ಅವರ ಮತ್ತೊಂದು ಗೆಟಪ್ ಫೋಟೋವನ್ನು ಹಂಚಿಕೊAಡಿದ್ದಾರೆ.ಕೋಟಿ […]

ಸಂಜು ವೆಡ್ಸ್ ಗೀತಾ ೨: ಸ್ವಿಟ್ಜರ್ ಲ್ಯಾಂಡ್ ಅನುಭವ ಬಿಚ್ಚಿಟ್ಟ ಟೀಮ್

ನಾಲ್ಕು ತಿಂಗಳ ಹಿಂದೆ ಪ್ರಾರಂಭವಾಗಿದ್ದ ನಾಗಶೇಖರ್ ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ ೨′ ಚಿತ್ರದ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಇದೇ ತಿಂಗಳು ಚಿತ್ರತಂಡ ಸ್ವಿಟ್ಜರ್ ಲ್ಯಾಂಡ್‌ಗೆ ಹೋಗಿ ೨ ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಈವರೆಗೆ ನಡೆಸಿದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳಲೆAದು ನಿರ್ದೇಶಕ ನಾಗಶೇಖರ್ ಹಾಗೂ ತಂಡ ಮಾದ್ಯಮಗಳ ಮುಂದೆ ಬಂದಿತ್ತು. ಅಶೋಕ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಿಟ್ಜರ್ ಲ್ಯಾಂಡ್ ಶೂಟಿಂಗ್ ದೃಶ್ಯಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ನಾಗಶೇಖರ್ ಹಿಂದೆ ಸಂಜು […]

‘ಬೇಬಿ’ ಹುಡುಗಿಗೆ ಬಂಪರ್ ಆಫರ್

ಬೇಬಿ ಸಿನಿಮಾದ ಮೂಲಕ ಚಿತ್ರ ಜಗತ್ತಿನ ಡಾರ್ಲಿಂಗ್ ಆಗಿರುವ ವೈಷ್ಣವಿ ಇದೀಗ ಏಕಕಾಲಕ್ಕೆ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದಲ್ಲಿ ಇದು ಚರ್ಚೆಗೂ ಕಾರಣವಾಗಿದೆ. ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಮೂರು ಚಿತ್ರಗಳಿಗೆ ವೈಷ್ಣವಿ ನಾಯಕಿ ಎಂದು ಹೇಳಲಾಗುತ್ತಿದೆ.ಬೇಬಿ ಸಿನಿಮಾದ ಯಶಸ್ಸಿನ ನಂತರ ಇವರಿಗೆ ಸಾಕಷ್ಟು ಆಫರ್ಸ್ ಬಂದವು. ಆದರೆ, ಅವರು ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದೇ ಕುತೂಹಲವಾಗಿತ್ತು. ಈಗ ಕುತೂಹಲಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ವೈಷ್ಣವಿ. ಬೇಬಿ […]

ರಾಮಮಂದಿರ ಉದ್ಘಾಟನೆಗೆ ಕೈ ನಾಯಕರು ಬರುತ್ತಾರೆಂಬ ವಿಶ್ವಾಸವಿದೆ

ಉಡುಪಿ:ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನವರು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಒಂದು ವೇಳೆ ಕಾರ್ಯಕ್ರಮಕ್ಕೆ ಗೈರಾದರೆ ದೇಶಕ್ಕೆ ಮತ್ತು ನಮ್ಮ ಶ್ರದ್ದೆಗೆ ಅವರು ಮಾಡಿವ ಅವಮಾನವಾಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ದೇಶದ ಎಲ್ಲರೂ ಭಾಗವಹಿಸಬೇಕು. ಎಲ್ಲರೂ ರಾಮನ ದರ್ಶನ ಮಾಡಬೇಕು, ಇದು ನಮ್ಮ ಅಸ್ಮಿತೆಯ ಪ್ರಶ್ನೆಯಾಗಿದೆ. ಗುಲಾಮಗಿರಿಯನ್ನು […]

ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ

ಬೆಂಗಳೂರುಬೆಂಗಳೂರಿನ ರಸ್ತೆ ಗುಂಡಿಗಳು ಜನರ ಜೀವಕ್ಕಾಗಿ ಕಾದು ಕುಳಿತಂತಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ರಸ್ತೆಗುಂಡಿಗಳನ್ನು ಮುಚ್ಚಲು ಪಾಲಿಕೆ ವಿಫಲವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಈ ಯಮ ಗುಂಡಿಗಳಿAದಾಗಿ ವಾಹನ ಸವಾರರು ಸರ್ಕಸ್ ಮಾಡುತ್ತಲೇ ಓಡಾಡುವಂತಾಗಿದೆ. ಸ್ವಲ್ಪ ಯಾಮಾರಿದ್ರು ಕೂಡ ಅನಾಹುತ ಆಗೊದಂತು ತಪ್ಪಿದ್ದಲ್ಲ, ಇನ್ನೂ ಬನ್ನೆರುಘಟ್ಟ ಮುಖ್ಯರಸ್ತೆಯ ಮಧ್ಯದಲ್ಲೆ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಓಡಾಡಲು ಕೂಡ ಭಯ ಪಡುವಂತಾಗಿದೆ. ಈ ಬಗ್ಗೆ ಸ್ಥಳೀಯರು ಮಾತನಾಡಿ ಇಲ್ಲಿ ಗುಂಡಿಗಳು ಇವೆ ಇದರಿಂದ […]

ಲೋಕಸಭೆ ಚುನಾವಣೆ: 11 ಸಚಿವರನ್ನುಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ

ಬೆAಗಳೂರು:ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಕಾಂಗ್ರೆಸ್ ಈಗಿನಿಂದಲೇ ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದೆ. ಬಿಜೆಪಿ ಹಾಕಿದ ಮಂತ್ರವನ್ನೇ ತಿರುಮಂತ್ರ ಮಾಡಿ ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಸಜ್ಜಾಗಿದೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಕರ್ನಾಟಕದಲ್ಲಿ ಬಿಜೆಪಿಗೆ ಹೊಡೆತ ಕೊಡಬೇಕು ಎಂಬ ತಂತ್ರ ಹಾಕಿಕೊಂಡಿರುವ ಕಾಂಗ್ರೆಸ್, ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದರ ಭಾಗವಾಗಿ ರಾಜ್ಯದ ಬರೋಬ್ಬರಿ ೧೧ ಸಚಿವರನ್ನು ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿದೆ ಎಂಬ […]