ಹಿಂದೂ ಸಂಘಟನೆ ಅಧ್ಯಕ್ಷನ ಮೇಲೆ ರೌಡಿಶೀಟ್ ಕೇಸ್ ಓಪನ್!ಮಠಾಧೀಶರ ವ್ಯಾಪಕ ಆಕ್ರೋಶ
ಕಲಬುರಗಿ:ಜಿಲ್ಲಾ ಹಿಂದೂ ಜಾಗೃತಿ ಸೇನಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಎಂಬುವವರ ಮೇಲೆ ಕೇವಲ ಒಂದು ಕೇಸ್ ದಾಖಲಾಗಿರುವುದಕ್ಕೆ ಕಲಬುರಗಿ ನಗರದ ಆರ್.ಜೆ ನಗರ ಠಾಣೆಯಲ್ಲಿ ರೌಡಿಶೀಟರ್ಕೇಸ್ ದಾಖಲಿಸಲಾಗಿದೆ. ಇದು ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವಿವಿಧ ಮಠಾಧೀಶರು ಆಕ್ರೋಶ ಹೊರಹಾಕುತ್ತಿದ್ದಾರೆ.ಅಷ್ಟಕ್ಕೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ ಸಮಾಜದಲ್ಲಿ ಶಾಂತಿ ಕದಡಲು ಲಕ್ಷ್ಮಿಕಾಂತ್ ಯತ್ನಿಸಿದ್ದಾರೆಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇನ್ನೂ ಯಾವುದೇ […]












































































































































































































































































































































































































































































































































































































































































































































































































































































































































































































































































































































