July 29, 2026

ಮಧ್ಯರಾತ್ರಿ 2.15 ರವರೆಗೆ ಮೆಟ್ರೋ ಸೇವೆ

ಬೆಂಗಳೂರು:ಹೊಸ ವರ್ಷದ ಪಾರ್ಟಿ ಮೂಡ್‌ನ ಬೆಂಗಳೂರಿಗೆ ‘ನಮ್ಮ ಮೆಟ್ರೋ’ ಗುಡ್ ನ್ಯೂಸ್ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.31 ರ ಮಧ್ಯರಾತ್ರಿಯಿಂದ ಜನವರಿ 1ರ ಬೆಳಗಿನ ಜಾವ 2.15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.2024 ರ ಹೊಸ ವರ್ಷದ ಮುನ್ನಾದಿನ, ನಿಗಮವು ಮೆಟ್ರೋ ರೈಲು ಸೇವೆಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಿಸ್ತರಿಸುತ್ತಿದೆ. ಜ.1 ರ ಮಧ್ಯರಾತ್ರಿ 1.30ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಇರಲಿದೆ. […]

ಎಕ್ಸ್ಪ್ರೆಸ್‌ವೇಗೆ ಸಿದ್ದರಾಮಯ್ಯ-ಮಹದೇವಪ್ಪಜೋಡಿ ರಸ್ತೆ ಅಂತ ಹೆಸರಿಡೋಣ

ಮೈಸೂರು:ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ ರಸ್ತೆಗೆ ಸಿದ್ದರಾಮಯ್ಯ ಇಷ್ಟು ಅನುದಾನ ಕೊಟ್ಟಿದ್ದೀನಿ ಅಂತ ಹೇಳಿಬಿಡಲಿ, ಅವರ ಹೆಸರನ್ನೇ ರಸ್ತೆಗೆ ಇಡೋಣ. ಬೇಕಿದ್ದರೆ ಸಿದ್ದರಾಮಯ್ಯ-ಮಹದೇವಪ್ಪ ಜೋಡಿ ರಸ್ತೆ ಅಂತಾನೇ ನಾಮಕರಣ ಮಾಡೋಣ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಕ್ಸ್ಪ್ರೆಸ್‌ವೇ ನಿರ್ಮಾಣ ಯೋಜನೆಗೆ ೮,೫೦೦ ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಎಂಟುವರೆ ರೂಪಾಯಿಯನ್ನೂ ಕೊಟ್ಟಿಲ್ಲ. ಅವರು ಇಷ್ಟು ಕೊಟ್ಟಿದ್ದೀನಿ ಅಂತ ಹೇಳಿದ್ರೆ ರಸ್ತೆಗೆ ಅವರ ಹೆಸರನ್ನೇ ಇಡೋಣ ಎಂದು ಕುಟುಕಿದ್ದಾರೆ.ಎಕ್ಸ್ಪ್ರೆಸ್‌ವೇ ಹೆದ್ದಾರಿ […]

ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

ಬೆಂಗಳೂರು:ಸಾರಿಗೆ ಇಲಾಖೆಯ ವತಿಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು ಕೆಎಸ್‌ಆರ್ ಟಿಸಿ ಮತ್ತು ಬಿಎಂಟಿಸಿ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಜೊತೆಗೆ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದು ಎಲ್ಲಾ ವಿಮಾನ ನಿಲ್ದಾಣಗಳಿಗಿಂತ ವಿಭಿನ್ನವಾಗಿದೆ ಮತ್ತು ಅತಿ ದೊಡ್ದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ […]

ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆಮನೆಯಲ್ಲಿ ಸಿಕ್ತು 2019ರ ಕ್ಯಾಲೆಂಡರ್

ಚಿತ್ರದುರ್ಗ:ನಗರದ ಪಾಳು ಬಿದ್ದ ಮನೆಯೊಂದರಲ್ಲಿ ೫ ಅಸ್ಥಿಪಂಜರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸತತ ೪ ವರ್ಷಗಳಿಂದ ಬಾಗಿಲು ಮುಚ್ಚಿದ್ದ ಪಾಳು ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿವೆ ಎಂದು ದೂರು ದಾಖಲಾಗಿದೆ.ಪವನ್ ಕುಮಾರ್ ಎಂಬವರು ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ಸಂಬAಧಿ ಜಗನ್ನಾಥ ರೆಡ್ಡಿ ಮತ್ತು ಕುಟುಂಬ ವಾಸವಾಗಿತ್ತು. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ವಾಸವಾಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ […]

ಸ್ವಪಕ್ಷದವರಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ

ಬೆಂಗಳೂರು:ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡಿ ಮಾಲ್ ಮತ್ತು ಹೋಟೆಲ್‌ಗಳ ಮೇಲೆ ಕಲ್ಲುತೂರಾಟ ನಡೆಸಿದ ಸಂಬAಧ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ೨೯ ಜನ ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಸರ್ಕಾರದ ವಿರುದ್ಧ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಅಸಮಾಧಾನ ಹೊರ ಹಾಕಿದ್ದಾರೆ.ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡಬಾರದೆಂದು ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಕೋಮುದ್ವೇಷ ಹರಡಿ ಸಮಾಜದ […]

ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣ್ತಿದೆ

ಬೆಂಗಳೂರು:ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅಲ್ಲ. ಕಾಂಗ್ರೆಸ್‌ಗೂ ಯತ್ನಾಳ್‌ಗೂ ಸಂಬAಧ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣುತ್ತಿದೆ. ಯತ್ನಾಳ್ ಹಿಂದಿನಿAದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದು ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ. ಸರ್ಕಾರ ಕೂಡ ತನಿಖೆ ಮಾಡ್ತಾ ಇದೆ. ಕೊರೊನಾ ಸಂದರ್ಭದಲ್ಲಿ […]

ಮೋದಿ ಸುನಾಮಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಕಲಬುರಗಿ:ಪ್ರಧಾನಿ ನರೇಂದ್ರ ಮೋದಿಯವರ ಸುನಾಮಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಮೋದಿ ಅವರ ಸುನಾಮಿ ಇದೆ. ದೇಶದ ಜನ ಮೋದಿ ಅವರ ಅಧಿಕಾರದಲ್ಲಿ ಹೊಸ ಕನಸು ಕಾಣುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ 25 ಸ್ಥಾನ ಬಿಜೆಪಿ ಗೆಲ್ಲುತ್ತದೆ. ಮೋದಿ ಸುನಾಮಿ ತಡೆಯಲು ಯಾರಿಂದಲೂ ಆಗಲ್ಲ. ಯಾವ ಗೋಡೆ ಡ್ಯಾಂ ಸಹ ಈ ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಂಸತ್ತಿನಲ್ಲಿ ಒಂದು […]

ವಿಜಯಪುರಕ್ಕೆ ವಿಜಯೇಂದ್ರ ಭೇಟಿಜಿಲ್ಲಾ ಬಿಜೆಪಿಯಲ್ಲಿ ಸಂಚಲನ

ವಿಜಯಪುರ:ಕಳೆದ ವಿಧಾನಸಭೆ ಚುನಾವಣೆಗೆ ಮುಂಚೆ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳ ಸುರಿಮಳೆ ಸುರಿಸಿದರು. ಬಳಿಕ ಚುನಾವಣೆ ವೇಳೆ ಯಡಿಯೂರಪ್ಪ ನಮ್ಮ ಹಿರಿಯರು ಅಂತಾ ಹೇಳಿ ಆಶ್ಚರ್ಯ ಮೂಡಿಸಿದರು. ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನ ವಿಜಯೇಂದ್ರ ಹಿಡಿಯುತ್ತಿದಂತೆ ಇದೀಗ ಮತ್ತೆ ಯತ್ನಾಳ್ ಯಡಿಯೂರಪ್ಪ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಅಂತರ್ ಯುದ್ಧದ ಮಧ್ಯೆ ವಿಜಯೇಂದ್ರ ಅವರು ಯತ್ನಾಳ್ ಅಡ್ಡಾಕ್ಕೆ ಲಗ್ಗೆ ಇಡುತ್ತಿದ್ದಾರೆ.ಹೌದು. ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ […]

ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕಶೀಘ್ರವೇ ಸುಗ್ರೀವಾಜ್ಞೆ

ಬೆಂಗಳೂರು:ಅಂಗಡಿ, ಮಾಲ್‌ಗಳ ನಾಮಫಲಕಗಳು ಕನ್ನಡ ಭಾಷೆಯಲ್ಲೇ ಇರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.ಅAಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಸಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಪರಮೇಶ್ವರ್, ಬಿಬಿಎಂಪಿ, ಗೃಹ ಇಲಾಖೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಧಿವೇಶನ ಇಲ್ಲದೆ ಇರುವುದರಿಂದ ಸುಗ್ರಿವಾಜ್ಞೆ ಹೊರಡಿಸುತ್ತಿದ್ದೇವೆ. ಫೆಬ್ರವರಿ ೨೮ರ ಒಳಗೆ ೬೦% ಕನ್ನಡ ಫಲಕ […]

ಮನಸ್ಸು ಬದಲಿಸಿದ ಸದಾನಂದ ಗೌಡಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು

ಬೆಂಗಳೂರು:ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ ಸದಾನಂದ ಗೌಡ ಅವರು ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಆದ್ರೆ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯೂಟರ್ನ್ ಹೊಡೆದಿದ್ದು, ಈ ಬಾರಿಯೂ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿರುವ ಸದಾನಂದ ಗೌಡ, ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಫರ್ಧೆಗೆ ಒತ್ತಡ ಹೆಚ್ಚಾಗಿದೆ. ನಿನ್ನೆ ನಮ್ಮ ಹಿರಿಯ ನಾಯಕರು ಮನೆಗೆ ಬಂದು ಸ್ಪರ್ಧೆ ಮಾಡಿ ಎಂದು […]