July 29, 2026
#ರಾಷ್ಟ್ರೀಯ

ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಒಳನುಸುಳಲು ಯತ್ನಿಸಿದ ಭಯೋತ್ಪಾದಕರನ್ನು ಸೇನೆ ತಡೆದಿದೆ. ಈ ವೇಳೆ ನಡೆದ ಎನ್‍ಕೌಂಟರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಆತನ ದೇಹವನ್ನು ಜೊತೆಗಿದ್ದ ಉಗ್ರರು ಪಾಕಿಸ್ತಾನದ ಕಡೆಗೆ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://imasdk.googleapis.com/js/core/bridge3.609.1_en.html#goog_657159857

ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಅಖ್ನೂರ್‍ನ ಖೌರ್ ಸೆಕ್ಟರ್‍ನಲ್ಲಿ ಗಡಿಯಿಂದ ಈ ಕಡೆಗೆ ನುಸುಳುತ್ತಿರುವುದನ್ನು ಗಮನಿಸಿದಾಗ ಕಾರ್ಯಾಚರಣೆ ನಡೆದಿದೆ. ಡಿ.23ರ ಮುಂಜಾನೆ ಭಯೋತ್ಪಾದಕರ ಚಲನವಲನಗಳು ಕಂಡು ಬಂದಿದೆ. ಈ ದೃಶ್ಯ ಗಡಿಯಲ್ಲಿನ ಸೇನೆಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. 

ರಕ್ಷಣಾ ಸಿಬ್ಬಂದಿ ಹಂಚಿಕೊಂಡ ವೀಡಿಯೋ ಕ್ಲಿಪ್‍ನಲ್ಲಿ, ನಾಲ್ವರು ಭಯೋತ್ಪಾದಕರು ಕತ್ತಲಲ್ಲಿ ಗಡಿಯಾಚೆಯಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಉಗ್ರರ ಮೇಲೆ ಸೇನೆ ಗುಂಡು ಹಾರಿಸಿದ್ದು, ಓರ್ವ ಸಾವಿಗೀಡಾಗಿದ್ದಾನೆ. ಕ್ಯಾಮೆರಾದಲ್ಲಿನ ವೀಡಿಯೋ ಪರಿಶೀಲಿಸಿದಾಗ ಉಳಿದ ಉಗ್ರರು ಮೃತ ಉಗ್ರನ ದೇಹವನ್ನು ಎಳೆದೊಯ್ದಿರುವುದು ಬೆಳಕಿಗೆ ಬಂದಿದೆ.

ರಕ್ತದ ಕಲೆಗಳು ಭಯೋತ್ಪಾದಕನ ಹತ್ಯೆಯನ್ನು ದೃಢಪಡಿಸಿದ್ದು, ಈ ಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Leave a comment

Your email address will not be published. Required fields are marked *