July 29, 2026
#ಜಿಲ್ಲೆ

ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಗುದ್ದಲಿ ಪೂಜೆ ಮಾಡ್ತೀವಿ: ಮುತಾಲಿಕ್

ಕಲಬುರಗಿ: ಜಿಲ್ಲೆಯ ಆಳಂದ  ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯರು ಪ್ರತಿಷಠಾಪನೆ ಮಾಡಿದ ಈಶ್ವರ ಲಿಂಗವಿದೆ. ಈ ಹಿಂದೆ ಕೋರ್ಟ್ ಇಲ್ಲಿ ಪೂಜೆಗೆ ಅನುಮತಿ ನೀಡಿದೆ. ಈ ಜಾಗದಲ್ಲಿ ನಾವು ಶಿವರಾತ್ರಿ ದಿನ ಗುದ್ದಲಿ ಪೂಜೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮದೇ ಸ್ಥಾನ, ಮುಸ್ಲಿಂ ಸಮುದಾಯ ಅತಿಕ್ರಮಣ ಮಾಡಿಕೊಂಡು, ದರ್ಗಾ ಮಾಡಿ ಉರುಸ್ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಪೂಜೆಗೆ ಕೋರ್ಟ್ ಅನುಮತಿ ಕೊಟ್ಟಿದೆ. ನಾವು ಶಿವರಾತ್ರಿ ದಿನ ಇಲ್ಲಿ ಗುದ್ದಲಿ ಪೂಜೆ ನೆರವೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಸಂಸದ ಡಿ.ಕೆ ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ವಿಚಾರವಾಗಿ, ದೇಶ ತುಂಡು ಮಾಡೋದು ದೇಶ ದ್ರೋಹದ ಹೇಳಿಕೆಯಾಗಿದೆ. ದೇಶ ತುಂಡು ಮಾಡೋಕೆ ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ? ಆರ್ಥಿಕತೆ ಹೆಸರಲ್ಲಿ ದೇಶ ತುಂಡು ಮಾಡೋದಾದ್ರೆ, ಸ್ವಾತಂತ್ರ್ಯ ಹೋರಾಟ ಯಾಕೆ ಮಾಡಬೇಕಾಗಿತ್ತು? ನೀವು ಕಾಂಗ್ರೆಸ್‍ನವರು ಆಗ ಹೋರಾಟ ಮಾಡಿರೋದು, ಇವಾಗ ದೇಶ ಒಡೆಯೋದಕ್ಕಾ ಹೇಗೆ ಎಂದು ಪ್ರಶ್ನಿಸಿದರು. ಈಗ ದಕ್ಷಿಣ ಭಾರತ ಒಡೆಯೋದು ಎಂದರೆ ಏನು? ಆ ಹಿನ್ನೆಲೆಯಲ್ಲಿ ಈಶ್ವರಪ್ಪ ಒಬ್ಬ ದೇಶಭಕ್ತನಾಗಿ ನೋವು ತಡೆಯಲಾರದೆ ಹೇಳಿದ್ದಾರೆ. ನಾನು ಈಶ್ವರಪ್ಪ ವಿಚಾರ ಬೆಂಬಲಿಸುತ್ತಿದ್ದೇನೆ. ರಾಜಕಾರಣಿಗಳಿಗೆ ಒಂದೇ ಅಸ್ತ್ರ ಇರೋದು, ಪೊಲೀಸ್ ಠಾಣೆ, ಹೆದರಿಸೋದು ಬೇದರಿಸೋದು ಇದೇ ಉದ್ಯೋಗವಾಗಿದೆ. ನೈತಿಕವಾಗಿ, ಬೌದ್ಧಿಕವಾಗಿ ಚರ್ಚೆ ಮಾಡುವ ತಾಕತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಎಂಬ ಶಾಸಕ ಹರಿಶ್ ಪುಂಜಾ ಹೇಳಿಕೆ ವಿಚಾರವಾಗಿ, ಹಿಂದೂಗಳ ತೆರಿಗೆ ಹಿಂದೂಗಳಿಗೆ, ಮುಸ್ಲಿಮರ ತೆರಿಗೆ ಮುಸ್ಲಿಮರಿಗೆ ಎನ್ನುವುದು ಸರಿಯಲ್ಲ. ಮೋದಿಯವರು ರಾಷ್ಟ್ರವನ್ನು ಸಮಾನತೆಯಿಂದ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಸಮಾನತೆಯಿಂದ ಯಾವ ಬೇಧ-ಭಾವ ಇಲ್ಲದೇ 10 ವರ್ಷ ನಡೆಸಿಕೊಂಡು ಬಂದಿದ್ದಾರೆ. ಹೀಗೆ ಪ್ರತಿಯೊಬ್ಬರೂ ತಮ್ಮ ಟ್ಯಾಕ್ಸ್ ಮೂಲಕ ಜೀವನ ನಡೆಸುತ್ತೇವೆ ಎಂದರೆ ಅದು ಮೂರ್ಖತನದ ಹೇಳಿಕೆ ಎಂದಿದ್ದಾರೆ.
#ಜಿಲ್ಲೆ

ನನ್ನ ಸೋಲಿಗೆ ನಮ್ಮೊಳಗಿನ ಪಿತೂರಿಯೇ ಕಾರಣಭಾವುಕರಾದ ಬಿಜೆಪಿ ಮಾಜಿ ಶಾಸಕಿ

ತುಮಕೂರು:ವಿಧಾನಸಭಾ ಚುನಾವಣೆ ನಡೆದು ಏಳು ತಿಂಗಳು ಕಳೆದರೂ ಸಹ ಇನ್ನೂ ಕೂಡ ಪರಾಜಿತ ಅಭ್ಯರ್ಥಿಗಳ ಹೊಟ್ಟೆಯೊಳಗಿನ ನೋವು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಬಿಜೆಪಿ ಮಾಜಿ ಶಾಸಕಿ ರೂಪಾಲಿ
#ಜಿಲ್ಲೆ

ಯು.ಟಿ ಖಾದರ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ರೋಶ

ಮಂಗಳೂರು:ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ನಡೆದ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಭಾಗವಹಿಸಿ
#ಜಿಲ್ಲೆ

ಯುವತಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್

ನೆಲಮಂಗಲ:ಯುವತಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದರ್ ಮೂಲದ ಯುವಕ ಶಿವಕುಮಾರ್ ಹೊಸಳ್ಳಿ (25)
#ಜಿಲ್ಲೆ

ಕಲಬುರಗಿ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಕಸರತ್ತು,ನಿತಿನ್ ಗುತ್ತೆದಾರ್ ಸೆಳೆಯಲು ‘ಕೈ’ ತಂತ್ರ

ಕಲಬುರಗಿ:ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್, ಬಿಜೆಪಿ ತಂತ್ರಗಾರಿಕೆ ಚುರುಕುಗೊಳಿಸಿವೆ. ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕಸರತ್ತುಗಳನ್ನೂ ಆರಂಭಿಸಿವೆ. ಕಲಬುರಗಿ ಲೋಕಸಭಾ ಕ್ಷೇತ್ರ ಗೆಲ್ಲಲು ಕೈ, ಕಮಲ ಪಕ್ಷಗಳು
#ಜಿಲ್ಲೆ

ಹಿಂದೆಯೇ ಅಡ್ವಾಣಿಗೆ ಭಾರತ ರತ್ನ ಕೊಡಬೇಕಿತ್ತು

ಬೆಳಗಾವಿ:ಲಾಲ್ ಕೃಷ್ಣ ಅಡ್ವಾಣಿ ಅವರು ಭಾರತ ರತ್ನ ಗೌರವಕ್ಕೆ ಭಾಜನರಾಗಿರುವದಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ.ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ
#ಜಿಲ್ಲೆ

ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಯಾಕಿಲ್ಲ

ದಾವಣಗೆರೆ:ಎಲ್.ಕೆ.ಅಡ್ವಾಣಿ ಅವರಿಗೆ ‘ಭಾರತ ರತ್ನ’ ಕೊಡಲಿ ಬಿಡಿ, ಪಾಪ ಬೇಡ ಎಂದವರು ಯಾರು? ನಾವು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಿ ಎಂದು
#ಜಿಲ್ಲೆ

ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರ ನಿರಾಕರಣೆ;ಪ್ರೇಮಿಗಳಿಬ್ಬರು ನೇಣಿಗೆ ಶರಣು

ಕಲಬುರಗಿ:ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ.ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ
#ಜಿಲ್ಲೆ

ಜಾತಿ ಕಾರಣಕ್ಕೆ ನಮ್ಮನ್ನ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಟ್ಟಿರಲಿಲ್ಲ

ಚಿತ್ರದುರ್ಗ:ಜಾತಿ ಕಾರಣಕ್ಕೆ ಬಾಗೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ ನಮಗೂ ಗರ್ಭಗುಡಿ ಪ್ರವೇಶಕ್ಕೆ ಬಿಡಲಿಲ್ಲ. ನಾವು ದೇಗುಲಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ದೇವಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ಸಾಣೇಹಳ್ಳಿಯಲ್ಲಿ ಕನಕ ಪೀಠದ
#ಜಿಲ್ಲೆ

ವೋಟ್ ಹಾಕಿಲ್ಲ ಅಂತ ಯಾರನ್ನಾದ್ರು ಓಡಿಸ್ಕೊಂಡು ಹೋಗ್ತಾ ಇದೀವಾ

ರಾಮನಗರ:ವೋಟ್ ಹಾಕಿಲ್ಲ ಅಂತ ಯಾರನ್ನಾದರೂ ಓಡಿಸ್ಕೊಂಡು ಹೋಗುತ್ತಿದ್ದೀವಾ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದ