ಸಿನಿಮಾ ರಂಗದಲ್ಲಿ ಮತ್ತೆ ಡ್ರಗ್ಸ್ ಸದ್ದು
ಚಿತ್ರೋದ್ಯಮದಲ್ಲಿ ಹೆಚ್ಚೆಚ್ಚು ಡ್ರಗ್ಸ್ ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ತೆಲುಗಿನ ನಟ ನವದೀಪ್ ಮನೆಯ ಮೇಲೆ ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೊನ್ನೆಯಷ್ಟೇ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದರು.

ಈ ಹಿಂದೆಯೂ ತೆಲುಗಿನ ಅನೇಕ ನಟರ ಮೇಲೆ ಡ್ರಗ್ಸ್ ಸೇವಿಸುವ ಆರೋಪ ಕೇಳಿ ಬಂದಿತ್ತು. ನೋಟಿಸ್ ನೀಡಿ ವಿಚಾರಣೆಗೂ ಕರೆಯಿಸಿಕೊಂಡಿದ್ದರು. ಆದರೂ ಚಿತ್ರರಂಗದ ಮೇಲೆ ಪದೇ ಪದೇ ಡ್ರಗ್ಸ್ ಕುರಿತಾಗಿ ಆರೋಪಗಳು ಕೇಳಿ ಬರುತ್ತಿವೆ. ಹಾಗಾಗಿ ಅನೇಕ ಬಾರಿ ದಾಳಿಗಳನ್ನೂ ಮಾಡಲಾಗಿದೆ.

ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ವಿಷಗಾಳಿ ಬೀಸಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು.
- casino 2026
- casino offers
- fresh casinos
- Gry
- latest casinos
- Privacy
- Uncategorized
- ಅಂತರರಾಷ್ಟ್ರೀಯ
- ಕೃಷಿ
- ಕ್ರೀಡೆಗಳು
- ಚಲನಚಿತ್ರ
- ಜಿಲ್ಲೆ
- ಜೀವನಶೈಲಿ
- ಜ್ಯೋತಿಷ್ಯ
- ತಂತ್ರಜ್ಞಾನ
- ಬೆಂಗಳೂರು
- ರಾಷ್ಟ್ರೀಯ
- ವೀಡಿಯೊ
ಕನ್ನಡದಲ್ಲೂ ಈ ಹಿಂದೆ ಹಲವರ ಮೇಲೆ ಡ್ರಗ್ಸ್ ಸೇವಿಸುವ ಆರೋಪ ಕೇಳಿ ಬಂದಿತ್ತು. ರಾಗಿಣಿ, ಸಂಜನಾ ಸೇರಿದಂತೆ ಹಲವರು ಜೈಲು ವಾಸವನ್ನೂ ಅನುಭವಿಸಿ ಬಂದರು. ಇನ್ನೂ ಕೆಲವು ನಟರು ವಿಚಾರಣೆಗೆ ಹಾಜರಾಗಿದ್ದರು.







































































































































































































































































































































































































































































































































































































































































































































































































































































































































































































































































































































