October 28, 2026
#ರಾಷ್ಟ್ರೀಯ

ಮಸ್ಕ್ನ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

ನವದೆಹಲಿ:
ಭಾರತದ ಸಂಪರ್ಕ ಉಪಗ್ರಹ ಜಿಸ್ಯಾಟ್-20 ಉಪಗ್ರಹದ ಉಡಾವಣೆಗಾಗಿ ಮೊದಲ ಬಾರಿಗೆ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ – ೯ ರಾಕೆಟ್ ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.
ಸುಮಾರು 230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಹೆಗ್ಗಳಿಕೆ ಫಾಲ್ಕನ್-9 ರಾಕೆಟ್‌ನದ್ದಾಗಿದೆ. ಸೂಕ್ತ ಸಮಯದಲ್ಲಿ ಬೇರೆ ರಾಕೆಟ್‌ಗಳು ಲಭ್ಯವಿಲ್ಲದೇ ಇರುವುದರಿಂದ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಾಕೆಟ್ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಇಸ್ರೋದಿಂದ ವಾಣಿಜ್ಯ ಉಡಾವಣೆಗಳನ್ನು ನಡೆಸುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ ೨ನೇ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಏನಿದು ಜಿಸ್ಯಾಟ್-20 ಉಪಗ್ರಹ?:
ಪ್ರಪಂಚದಾದ್ಯAತ ಉಪಗ್ರಹ ಆಧಾರಿತ ಇಂಟರ್ನೆಟ್ ವ್ಯವಸ್ಥೆ ಜನಪ್ರಿಯವಾಗುತ್ತಿದೆ. ಈ ಹೊತ್ತಿನಲ್ಲಿ ಭಾರತದ ಎಲ್ಲಾ ಪ್ರದೇಶಗಳಿಗೂ ಇಂಟರ್‌ನೆಟ್ ಸೌಲಭ್ಯ ತಲುಪುವಂತೆ ಮಾಡಲು ಇಸ್ರೋ ತಯಾರಿಸಿದ ಸಂಪರ್ಕ ಉಪಗ್ರಹವೇ ಜಿಸ್ಯಾಟ್-೨೦. ಇದು ಸೆಕೆಂಡಿಗೆ ೪೮ ಜಿಬಿ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲಿದೆ.

Leave a comment

Your email address will not be published. Required fields are marked *