September 12, 2026
#ಜಿಲ್ಲೆ

ನಂಜುಡೇಶ್ವರನಿಗೆ ಎರಚಿರುವುದು ಎಂಜಲು ನೀರಲ್ಲ, ಶುದ್ದ ನೀರು: ಪ್ರಧಾನ ಅರ್ಚಕ

ಮೈಸೂರು: ನಂಜುಂಡೇಶ್ವರನ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ್​ಗೆ ಕರೆ ನೀಡಲಾಗಿತ್ತು. ಇದೀಗ ಈ ಕುರಿತು ದೇವಾಲಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ್ದಾರೆ ಎಂದು ಕಪೋಲಕಲ್ಪಿತ ಹೇಳಿಕೆ ಹಾಗೂ ಚಿತ್ರಗಳನ್ನು ಕಿಡಿಗೇಡಿಗಳು ಹರಡುತ್ತಿದ್ದಾರೆ. ಜೊತೆಗೆ ಬಂದ್​ಗೆ ಕರೆ ನೀಡಿದವರು ಕಿಡಿಗೇಡಿಗಳು. ಇದರಿಂದ ಕ್ಷೇತ್ರದ ಪಾವಿತ್ರತೆಗೆ ದಕ್ಕೆಯುಂಟಾಗಿದೆ. ದೇವರಿಗೆ ಯಾವುದೇ ಎಂಜಲು ನೀರು ಎರಚಿಲ್ಲ. ಕಿಡಿಗೇಡಿಗಳ ವದಂತಿಗೆ ಕಿವಿಗೊಡಬೇಡಿ ಎಂದು ಪಕ್ರಟಣೆ ಹೊರಡಿಸಿದೆ.

ನಂಜನಗೂಡಿನ ಶಾಂತಿ ಸಭೆ ಬಳಿಕ ನಂಜುಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಮಾತನಾಡಿ ‘ದೇವರಿಗೆ ಎರಚಿರುವುದು ಶುದ್ದ ನೀರು, ಎಂಜಲು ನೀರು ಎರಚಿಲ್ಲ ಎಂದು ಸಭೆಯಲ್ಲಿ ಹೇಳಿದ್ದಾರೆ. ‘ನಮ್ಮ ರಾಕ್ಷಸನಿಗೂ ಅಪಮಾನವಾಗುತಿತ್ತು. ಇದರಿಂದ ರೇಖಾ ಚಿತ್ರ ಅಳಿಸಲು ನೀರು ಹಾಕಿದ್ದೇವೆ. ಇದು ಎಂಜಲು ನೀರಲ್ಲ, ಶುದ್ದ ನೀರು ಎಂದು ಹೇಳಿದ್ದಾರೆ. ಈ ಕಾರಣದಿಂದ ಇದನ್ನು ನಾವು ಒಪ್ಪಿಕೊಂಡಿದ್ದೇವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರುವ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಇದರಿಂದ ಬಂದ್​ಗೆ ಕೂಡ ಸಹಕಾರ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

Leave a comment

Your email address will not be published. Required fields are marked *