October 31, 2026
#ಜಿಲ್ಲೆ

ರಾಮಮಂದಿರ ಉದ್ಘಾಟನೆ ನಂತರ ಕೋಟ್ಯಂತರ ಭಕ್ತರಿಗೆ ಅವಕಾಶ

ಉಡುಪಿ:
ದೇಶದಲ್ಲಿ ರಾಮನ ಭಕ್ತರು, ಸಂತರು-ಮಹAತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು ರಾಮ ಮಂದಿರದ ಪ್ರಾಣ ಪ್ರತಿಷ್ಠೆಗೆ ಭಕ್ತರೆಲ್ಲಾ ಆಮಂತ್ರಿತರು. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಮಂತ್ರಣ ನೀಡಲು ಆಯ್ಕೆ ಮಾಡಿ ಆಹ್ವಾನ ಕೊಡಲಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಪೇಜಾವರ ಮಠದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಮಿತ ಸ್ಥಳ ಇರುವುದರಿಂದ ಎಲ್ಲರೂ ಭಾಗಿಯಾಗಲು ಕಷ್ಟವಾಗಲಿದೆ. ಪ್ರತಿಷ್ಠಾಪನೆಯ ನಂತರ ಕೋಟ್ಯಂತರ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶ ಇದೆ. ಯಾವುದೇ ಗೊಂದಲಗಳು ಆಗದಿರಲಿ ಎಂಬುದು ಟ್ರಸ್ಟ್ನ ಉದ್ದೇಶ. ದೇಗುಲದ ಪ್ರತಿಷ್ಠಾಪನೆ ಆಗಿರುವುದರಿಂದ ಇದನ್ನು ಯಾವುದೋ ಮೈದಾನದಲ್ಲಿ ಕಾರ್ಯಕ್ರಮ ನೆರವೇರಿಸಲು ಸಾಧ್ಯವಿಲ್ಲ ಎಂದರು.
ಜನವರಿ ೨೨ ರಂದು ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ಯಾರೂ ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದವರೆಲ್ಲರೂ ಮುಂದಿನ ದಿನದಲ್ಲಿ ಅಯೋಧ್ಯೆಗೆ ಬರಬೇಕು. ಅಯೋಧ್ಯೆಯಲ್ಲಿ ಅನೇಕ ಟೆಂಟ್, ಶೆಡ್ ತಯಾರಾಗಿದ್ದು, ಧನುರ್ಮಾಸ ಇರುವುದರಿಂದ ಹೊರಗೆ ಮಲಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

Leave a comment

Your email address will not be published. Required fields are marked *