October 29, 2026
#ಬೆಂಗಳೂರು

ಪ್ರಾಣಪ್ರತಿಷ್ಠೆ ಹಿನ್ನೆಲೆ ಹೈಅಲರ್ಟ್


ಬೆಂಗಳೂರು: ಜನವರಿ 22ರಂದು ಸೋಮವಾರ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಿಗಿ ಭದ್ರತೆ ನಿಯೋಜಿಸಲಾಗುತ್ತಿದೆ.

ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.22ರಂದು ಯಾವುದೇ ಪೊಲೀಸ್ (Police) ಸಿಬ್ಬಂದಿಗೆ ರಜೆ ನೀಡದಂತೆ ಸೂಚಿಸಲಾಗಿದೆ. ಒಂದು ವೇಳೆ ರಜೆಯಲ್ಲಿರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. 

ಈ ಹಿಂದಿನ ಕೋಮುಗಲಭೆಗಳ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಅಂತಹ ಗಲಭೆಗಳಲ್ಲಿ ಭಾಗಿಯಾಗಿದ್ದವರ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಜೊತೆಗೆ ಆಯಾ ರೌಡಿಶೀಟರ್‌ಗಳ ಮೇಲೂ ನಿಗಾ ವಹಿಸಲಾಗಿದೆ.

ಅಲ್ಲದೇ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳು ಧರ್ಮದ ಮುಖಂಡರನ್ನ ಕರೆಸಿ ಶಾಂತಿಪಾಲನಾ ಸಭೆ ನಡೆಸಬೇಕು. ಈ ಬಗ್ಗೆ ತಮ್ಮ ಸಮುದಾಯದ ಮುಖಂಡರಿಗೆ ಸಲಹೆ ನೀಡುವಂತೆ ಸೂಚಿಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. 

ಜ.22ರಂದು ರಾಜ್ಯದಲ್ಲಿಯೂ ಯಾವುದೇ ರ‍್ಯಾಲಿಗಳಿಗೆ ಅವಕಾಶ ಇಲ್ಲ. ಆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ವಿವಿಧ ಜಿಲ್ಲೆಗಳಿಂದಲೂ ಪೊಲೀಸರನ್ನ ಕರೆಸಲಾಗಿದೆ. ಮಂಡ್ಯ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಹೆಚ್ಚವರಿ ಪೊಲೀಸರ ನಿಯೋಜನೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದಾರೆ. 

Leave a comment

Your email address will not be published. Required fields are marked *