July 27, 2026
#ಬೆಂಗಳೂರು

ಮಳೆನೀರಿನ ಮರುಬಳಕೆಗೆ ಬಿಬಿಎಂಪಿ ನಯಾ ಪ್ಲಾನ್; 115 ಪಾರ್ಕ್ ಗಳಲ್ಲಿ ಇಂಗುಗುAಡಿ ನಿರ್ಮಾಣಕ್ಕೆ ತಯಾರಿ

ಬೆಂಗಳೂರು:
ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರೀಟ್ ಕಾಡಾಗಿ ಬದಲಾಗ್ತಿರೋ ಬೆಂಗಳೂರಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳೋಕೆ ಬಿಬಿಎಂಪಿ ಮುಂದಾಗಿದೆ. ರಾಜ್ಯ ರಾಜಧಾನಿಯ ಪಾರ್ಕ್ ಗಳ ನಿರ್ವಹಣೆಗೆ ಮಳೆ ನೀರಿನ ಸದ್ಬಳಕೆಗೆ ಪ್ಲಾನ್ ಮಾಡಿರುವ ಬಿಬಿಎಂಪಿ, ಬೆಂಗಳೂರಿನ ೧೧೫ ಪಾರ್ಕ್ ಗಳಲ್ಲಿ ಇಂಗುಗುAಡಿ ನಿರ್ಮಿಸೋಕೆ ಸಜ್ಜಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಪಾರ್ಕ್ ಗಳಲ್ಲಿ ನಲನಲಿಸುವ ಗಿಡ-ಮರಗಳನ್ನ ಪೋಷಣೆ ಮಾಡೋಕೆ ಪಾಲಿಕೆ ಹಲವು ಕೆಲಸ ಮಾಡ್ತಿದೆ. ಸದ್ಯ ಕೆಲ ಪಾರ್ಕ್ ಗಳ ನಿರ್ವಹಣೆಯನ್ನ ಖಾಸಗಿಯವರಿಗೆ ವಹಿಸಿರೋ ಪಾಲಿಕೆ, ಇದೀಗ ಅSಖ ಫಂಡ್ ಬಳಸಿಕೊಂಡು ಮಳೆ ನೀರಿನ ಮರುಬಳಕೆಗೆ ಹೊಸದೊಂದು ಪ್ಲಾನ್ ಸಿದ್ಧಪಡಿಸಿದೆ. ಬೆಂಗಳೂರಿನ 115 ಪಾರ್ಕ್ಗಳಲ್ಲಿ ಇಂಗುಗುAಡಿ ನಿರ್ಮಿಸಲು ಸಜ್ಜಾಗಿರೋ ಪಾಲಿಕೆ, ಆ ಮೂಲಕ ಮಳೆನೀರಿನ ಸಂರಕ್ಷಣೆ ಜೊತೆಗೆ ಮರುಬಳಕೆ ಮಾಡೋದಕ್ಕೆ ಪ್ಲಾನ್ ಮಾಡಿದೆ. ಸದ್ಯ ಮುಂದಿನ ಮಾನ್ಸೂನ್ ಒಳಗಾಗಿ ಸುಮಾರು 1 ಸಾವಿರ ಇಂಗುಗುAಡಿಗಳ ನಿರ್ಮಾಣಕ್ಕೆ ಪ್ಲಾನ್ ಮಾಡಿರೋ ಪಾಲಿಕೆ, ಈಗಾಗಲೇ ದಾಸರಹಳ್ಳಿ, ಯಲಹಂಕ, ದಕ್ಷಿಣವಲಯದಲ್ಲಿ ಕೆಲಸ ಶುರುಮಾಡಿದೆ. ವರ್ಷದೊಳಗೆ ಸಾಧ್ಯವಾದಷ್ಟು ಗುಂಡಿಗಳನ್ನ ಮಾಡೋಕೆ ಸಜ್ಜಾಗಿದೆ. 20 ಅಡಿ ಆಳ, 4 ಅಡಿ ಅಗಲ ಇರೋ ಈ ಇಂಗುಗುAಡಿಗಳ ನಿರ್ಮಾಣಕ್ಕೆ ಒಂದು ಗುಂಡಿಗೆ 40 ಸಾವಿರ ರೂಪಾಯಿ ವೆಚ್ಚವಾಗಲಿದ್ದು ಈ ವೆಚ್ಚವನ್ನ ಅSಖ ಫಂಡ್ ಮೂಲಕ ಭರಿಸೋಕೆ ಪಾಲಿಕೆ ನಿರ್ಧರಿಸಿದೆ.
ಇನ್ನು ಈ ಹಿಂದೆ ಕೂಡ ಕೆಲ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಲಾಲ್ ಬಾಗ್, ಚಾಮರಾಜಪೇಟೆಯ ಜಿಂಕೆವನ ಸೇರಿದಂತೆ ಹಲವೆಡೆ ಕೆಲ ಇಂಗುಗುAಡಿಗಳನ್ನ ನಿರ್ಮಿಸಲಾಗಿದೆ. ಆದರೆ ಇದೀಗ ನಿರ್ಮಾಣ ಮಾಡಲಿರೋ ಇಂಗುಗುAಡಿಗಳು ಈ ಹಿಂದೆ ಇದ್ದ ಗುಂಡಿಗಳಿಗಿAತ ದೊಡ್ಡದಾಗಿರಲಿದ್ದು, ಒಂದು ಗುಂಡಿಯಿAದ ಸುಮಾರು 4 ಸಾವಿರ ಲೀಟರ್ ನೀರು ಸಂಗ್ರಹಿಸೋಕೆ ತಯಾರಿ ನಡೆಸಲಾಗುತ್ತಿದೆ.
ಒಟ್ಟಾರೆ ಬೆಂಗಳೂರಿನ ಒಂದಷ್ಟು ಕಡೆಗಳಲ್ಲಿ ನೀರಿನ ಹಾಹಾಕಾರ ಇರೋ ಸಮಸ್ಯೆಗಳು ಕೇಳಿಬರ್ತಿರೋ ಹೊತ್ತಲ್ಲೇ, ಪಾಲಿಕೆಯ ಈ ನಡೆ ಒಂದಷ್ಟು ಆಶಾಭಾವನೆ ಮೂಡಿಸ್ತಿದೆ. ಸದ್ಯ ವ್ಯರ್ಥವಾಗಿ ಹರಿದುಹೋಗುವ ಮಳೆ ನೀರಿನ ಸದ್ಬಳಕೆಗೆ ಕೈಗೊಂಡಿರೋ ಈ ಯೋಜನೆ ಎಷ್ಟರಮಟ್ಟಿಗೆ ಜಾರಿಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

Leave a comment

Your email address will not be published. Required fields are marked *