July 27, 2026
#Uncategorized

ಅಜರ್‌ಬೈಜಾನ್‌ ಮಿಲಿಟರಿ ದಾಳಿ – 25 ಮಂದಿ ಸಾವು

ಬಾಕು: ಅಜರ್‌ಬೈಜಾನ್ ಮಿಲಿಟರಿ ದಾಳಿಯಿಂದಾಗಿ 25 ಮಂದಿ ದಾರುಣ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಹೇಳಿಸಿದ್ದಾರೆ. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದಾರೆ.

https://imasdk.googleapis.com/js/core/bridge3.590.0_en.html#goog_1038049174Close Player

ಅರ್ಮೇನಿಯನ್-ನಿಯಂತ್ರಿತ ಕರಾಬಾಖ್‌ನಲ್ಲಿ ಕಾರ್ಯಾಚರಣೆಗೆ ಅಜರ್‌ಬೈಜಾನ್ ಸೈನ್ಯ ಕಳುಹಿಸಿದೆ. ಈ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಲಾಗಿದೆ. ನೆರೆಯ ಅರ್ಮೇನಿಯಾದೊಂದಿಗೆ ಯುದ್ಧದ ಬೆದರಿಕೆಯನ್ನು ಹಾಕಲಾಗಿದೆ. 

ಕರಾಬಾಖ್ ಅಂತಾರಾಷ್ಟ್ರೀಯವಾಗಿ ಅಜರ್‌ಬೈಜಾನ್ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆದರೆ ಅದರ ಭಾಗವನ್ನು ಪ್ರತ್ಯೇಕತಾವಾದಿ ಅರ್ಮೇನಿಯನ್ ಅಧಿಕಾರಿಗಳು ನಿಯಂತ್ರಿಸುತ್ತಿದ್ದಾರೆ. ಈ ಪ್ರದೇಶ ನಮ್ಮ ಪೂರ್ವಜರ ತಾಯ್ನಾಡು ಎಂದು ಹೇಳುತ್ತಿದ್ದಾರೆ.

ಈ ಪ್ರದೇಶವು ಎರಡು ಯುದ್ಧಗಳ ಕೇಂದ್ರವಾಗಿದೆ. ಅಜರ್‌ಬೈಜಾನ್ ಪಡೆಗಳು ಇದುವರೆಗೆ 60 ಕ್ಕೂ ಹೆಚ್ಚು ಮಿಲಿಟರಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದೆ. ಇತರ ಯಂತ್ರಾಂಶಗಳೊಂದಿಗೆ 20 ಮಿಲಿಟರಿ ವಾಹನಗಳನ್ನು ನಾಶಪಡಿಸಿವೆ ಬಾಕು ರಕ್ಷಣಾ ಸಚಿವಾಲಯ ತಿಳಿಸಿದೆ. 

ಯುರೋಪಿಯನ್‌ ಒಕ್ಕೂಟ, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳು ಅಜರ್‌ಬೈಜಾನ್ ಮಿಲಿಟರಿ ಕ್ರಮವನ್ನು ಖಂಡಿಸಿವೆ. ಕರಾಬಾಖ್‌ನ ಭವಿಷ್ಯದ ದೃಷ್ಟಿಯಿಂದ ಅರ್ಮೇನಿಯಾದೊಂದಿಗೆ ಶಾಂತಿ ಮಾತುಕತೆಗೆ ಕರೆ ನೀಡಿವೆ.

Leave a comment

Your email address will not be published. Required fields are marked *