October 29, 2026
#ಬೆಂಗಳೂರು

ಗುತ್ತಿಗೆದಾರರಿಂದ ಮತ್ತೆ ಬಿಲ್ ಕ್ಲಿಯರ್ ಫೈಟ್! ಸಿಎಂ ಸಿದ್ದು ಸರ್ಕಾರಕ್ಕೆ 30 ದಿನ ‘ಬಾಕಿ’ ಡೆಡ್‌‌ಲೈನ್

ಬೆಂಗಳೂರು: ಒಂದ್ಕಡೆ ಗುತ್ತಿಗೆದಾರನ ಕೋಟಿ ಕೋಟಿ ಖಜಾನೆ ಸಿಕ್ಕಿದ್ದರೆ ಇತ್ತ ಗುತ್ತಿಗೆದಾರರ ಸಂಘ ಬಾಕಿ ಬಿಲ್‌‌ಗಾಗಿ ಸರ್ಕಾರದ ವಿರುದ್ಧ ಮತ್ತೆ ಗುಡುಗಿದೆ. ಸರ್ಕಾರಕ್ಕೆ ಡೆಡ್‌‌ಲೈನ್ ಅನ್ನೂ ಕೊಟ್ಟಿದೆ. ಹೌದು, ಬಿಬಿಎಂಪಿ ಕಂಟ್ರಾಕ್ಟರ್‌ಗಳು ಮತ್ತೊಮ್ಮೆ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಇಡೀ ರಾಜ್ಯದಲ್ಲಿರೋ ಎಲ್ಲ ಕಂಟ್ರಾಕ್ಟರ್‌‌ಗಳ ಬಾಕಿ ಮೊತ್ತವನ್ನ 30 ದಿನೊಳಗೆ ಕ್ಲಿಯರ್ ಮಾಡ್ಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡ್ತೀವಿ ಅಂತ ಎಚ್ಚರಿಸಿದೆ.


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ. ದೊಡ್ಡ ದೊಡ್ಡ ಗುತ್ತಿಗೆಗಳನ್ನು ಪರರಾಜ್ಯದ ಗುತ್ತಿಗೆದಾರರಿಗೆ ನೀಡಲಾಗ್ತಿದೆಯಂತೆ. ರಾಜ್ಯದವರಿಗೆ ಸಣ್ಣಪುಟ್ಟ ಗುತ್ತಿಗೆ ಕೊಡ್ತಿದ್ದಾರಂತೆ. ಆದರೆ ಈ ಸರ್ಕಾರದಲ್ಲಿ ಯಾರೂ ಕಮಿಷನ್ ಕೇಳಿರೋ ಬಗ್ಗೆ ದೂರು ಕೊಟ್ಟಿಲ್ಲ ಅಂತ ಮಾತ್ರ ಅಧ್ಯಕ್ಷ ಕೆಂಪಣ್ಣ ಹೇಳ್ತಿದ್ದಾರೆ.

ಮೂರು ವರ್ಷ ಅಂದರೆ ಆಗೊಲ್ಲ, ನಾಲ್ಕೈದು ಬಾರಿ ಸಿಎಂ ಗೆ ಮನವಿ ಮಾಡಲಾಗಿದೆ. ಅರ್ಧದಷ್ಟು ಗಣ ಕೂಡಲೇ ಪಾವತಿ ಮಾಡಬೇಕು. 7 ಪರ್ಸೆಂಟ್ ಹಣ ಬಿಡುಗಡೆ ಮಾಡಿದರೆ ವರ್ಕೌಟ್ ಆಗೋಲ್ಲ. ಈಗಾಗಲೇ ನಾವು ಆತ್ಮಹತ್ಯೆ ಮಾಡಿಕೊಳ್ಳೊ ಸಂದರ್ಭ ನಿರ್ಮಾಣವಾಗಿದೆ. ಹಿರಿತನವನ್ನ ಕಡೆಗಣಿಸಲಾಗುತ್ತಿದೆ. ನಮ್ಮ ಪೇಮೆಂಟ್ ಮಾಡಿ ಆಮೇಲೆ ನಿಮ್ಗೆ ಏನ್ ಮಾಡ್ಬೇಕು ಮಾಡ್ಕೊಳಿ. ಪ್ರತಿ ಜಿಲ್ಲೆಯಲ್ಲೂ ಸಮ್ಯಸೆ ಹೆಚ್ಚಾಗಿದೆ. ಸರ್ಕಾರಕ್ಕೆ ಮನವಿ ಮಾಡ್ತಿದ್ದೀವಿ. ಬ್ಯಾಂಕ್ ನವರು ಎಲ್ಲಾ ಸೀಜ್ ಮಾಡ್ತಿದ್ದಾರೆ. ಒಂದು ಸಭೆಯನ್ನ ಮಾಡಿ ಸಮ್ಯಸೆ ಕೇಳಿ ಸಿಎಂ ಸಾಹೇಬ್ರೆ ಎಂದು ಕೆಂಪಣ್ಣ ಅವರು ಮನವಿ ಮಾಡಿದ್ದಾರೆ.


ಸದ್ಯ ರಾಜ್ಯ ಸರ್ಕಾರದಿಂದ 4 ಸಾವಿರ ಕೋಟಿ ಬಾಕಿ ಬಿಲ್ ಬರಬೇಕಿದ್ದು, ಅದನ್ನ ಕ್ಲಿಯರ್ ಮಾಡೋಕೆ ಗುತ್ತಿಗೆದಾರರ ಸಂಘ ಪಟ್ಟು ಹಿಡಿದಿದೆ. ತಾವು ಸಾಲ ಮಾಡಿ ಕೆಲಸ ಮಾಡಿದ್ದೀವಿ, ಈಗ ಹಣ ಕೈಸೇರದಿದ್ರೆ ನಮ್ಮ ಪಾಡೇನು ಅಂತ ಗುತ್ತಿಗೆದಾರರು ಅಳಲು ತೋಡಿಕೊಳ್ತಿದ್ದಾರೆ.

Leave a comment

Your email address will not be published. Required fields are marked *