ಬೆಂಗಳೂರಿನ ಪ್ರತಿಷ್ಠಿತ ದುಬಾರಿ ಹೋಟೆಲ್‌ನ ಊಟದಲ್ಲಿ ಜಿರಳೆ
ಬೆಂಗಳೂರು:
ರಾಜ್ಯ ರಾಜಧಾನಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಊಟ ಮಾಡುವಾಗ ಜಿರಳೆ ಸಿಕ್ಕಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಕ್ಯಾಪಿಟಲ್ ಹೋಟೆಲ್‌ನಲ್ಲಿ ಜಿರಳೆ ಪತ್ತೆಯಾಗಿದ್ದು, ನಗರದ ವಕೀಲೆಯೊಬ್ಬರು ನಿನ್ನೆ ಸಂಜೆ ಐದು ಗಂಟೆಗೆ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕೆಂದು ಹೋಗಿದ್ದರು. ಈ ವೇಳೆ ಪನ್ನೀರ್ ಗ್ರೇವಿ ಮತ್ತು ರೋಟಿ ಆರ್ಡರ್ ಮಾಡಿದ್ದರು. ಆದರೆ ಒಂದೆರಡು ತುತ್ತು ತಿನ್ನುತ್ತಿದ್ದಂತೆ ಪನ್ನೀರ್ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿ ಶಾಕ್‌ಗೆ ಒಳಗಾಗಿದ್ದಾರೆ.
ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಕ್ಯಾಪಿಟಲ್ ಹೋಟೆಲ್‌ನಲ್ಲಿ ಜಿರಳೆ ಪತ್ತೆಯಾಗಿದ್ದು, ಒಂದೆರಡು ತುತ್ತು ತಿನ್ನುತ್ತಿದ್ದಂತೆ ಪನ್ನೀರ್ ಗ್ರೇವಿಯಲ್ಲಿ ಜಿರಳೆ ಕಂಡು ಹೊಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಉಡಾಫೆ ಉತ್ತರ ನೀಡಿ ಬೇರೆ ಊಟ ನೀಡುವುದಾಗಿ ಹೇಳಿದ್ದಾರೆ. ಆಗ ವಕೀಲೆ ಶೀಲಾ ಅವರು ಕಿಚನ್‌ಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಕಿಚನ್‌ಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡುವಾಗ ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಶಾಕ್ ಆಗಿದ್ದು, ಕಿಚನ್‌ನಲ್ಲಿ ಗಲೀಜು ತುಂಬಿಕೊAಡಿತ್ತು. ಹೀಗಾಗಿ ಕಿಚನ್ ಕಂಡು ರಸ್ತೆಬದಿ ಹೊಟೆಲ್‌ಗಲೇ ಲೇಸು ಎಂದು ಕಿಡಿಕಾರಿದ್ದಾರೆ. ಘಟನೆ ಸಂಬAದ ಸ್ಥಳದಿಂದಲೇ ಫುಡ್ ಇನ್ಸ್ಪೆಕ್ಟರ್‌ಗೆ ಕರೆ ಮಾಡಿದ್ದಾರೆ. ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಅನ್ನಿಸಿಕೊಂಡಿರುವ ಕ್ಯಾಪಿಟಲ್ ಹೋಟೆಲ್‌ನ ಅವ್ಯವಸ್ಥೆಯ ಬಗ್ಗೆ ದೂರು ಹೇಳಿದ್ದಾರೆ.
ಆಗ ವಕೀಲೆ ಶೀಲಾ ಅವರ ಕರೆ ಸ್ವೀಕರಿಸಿದ ಫುಡ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಕೂಡ ಜವಾಬ್ದಾರಿ ಮರೆತು ಬೇಜವಾಬ್ದಾರಿಯಿಂದ ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೇ ನಾಳೆ ಬಂದು ಪರಿಶೀಲನೆ ಮಾಡುವುದಾಗಿ ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ಸಿಡಿದ ವಕೀಲೆ ಶೀಲಾ ಅವರು ಘಟನೆ ಸಂಬAದ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.








































































































































































































































































































































































































































































































































































































































































































































































































































































































































































































































































































































