July 29, 2026

ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನ

ಬೀಜಿಂಗ್: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನ ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಟೆನ್ನಿಸ್‌ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ರೋಹನ್-ರುತುಜಾ ಜೋಡಿಯು ಪಂದ್ಯದ ಆರಂಭಿಕ ಸೆಟ್‌ನಲ್ಲಿ ಹೋರಾಟ ನಡೆಸಿತು. ಚೀನಾದ ತೈಪೆಯ ಎನ್-ಶುವೊ ಲಿಯಾಂಗ್ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ 6-2 ರಿಂದ ಮೊದಲ ಸೆಟ್ ಅನ್ನು ಕಳೆದುಕೊಂಡಿತು. ಭಾರತದ ಜೋಡಿ ಅದ್ಭುತ ಪುನರಾಗಮನ ಮಾಡಿದರು. ನಂತರ ತಮ್ಮ ಎದುರಾಳಿಗಳನ್ನು 3-6 ಮತ್ತು 4-10 ರಿಂದ ನೇರ ಎರಡು ಸೆಟ್‌ಗಳಲ್ಲಿ […]

ನನ್ನ ಹೆಣದ ಮೇಲೆ ಸರ್ಕಾರ ಮಾಡಬೇಕು

ಬೆಂಗಳೂರು: ಅಧಿಕಾರ ಇರಲಿ ಇಲ್ಲದಿರಲಿ, ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸಿಎಂ ಸಿದ್ದರಾಮಯ್ಯ  ಟಾಂಗ್​ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಎಂದು ಇದೇ ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಹೇಳಿದ್ದರು. ಆದರೆ ಈಗ ಜನತಾ ದಳ ಉಳಿವಿಗಾಗಿ ಬಿಜೆಪಿ ಜೊತೆ ಸೇರುತ್ತಿದ್ದೇವೆ ಅಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ […]

ಚೆಲುವರಾಯಸ್ವಾಮಿ ವರ್ತನೆಗೆ ಸಾರ್ವಜನಿಕರು, ವಾಹನ ಸವಾರರು ಆಕ್ರೋಶ

ಕೋಲಾರ: ಕೃಷಿ ಸಚಿವ ಚೆಲುವರಾಯಸ್ವಾಮಿ ವರ್ತನೆಯಿಂದ ಕೋಲಾರದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದು, ಸಚಿವರ ವರ್ತನೆಗೆ  ಆಕ್ರೋಶ ವ್ಯಕ್ತವಾಗಿದೆ. ಹೌದು, ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಐಬಿ ವರೆಗೂ ನಗರದಲ್ಲಿ 2 ಕಿಮೀ ದೂರದಷ್ಟು ಜೀರೋ ಟ್ರಾಫಿಕ್ ಮೂಲಕ ಸಚಿವರು ಸಂಚಾರ ಮಾಡಿದ್ದಾರೆ. ಇನ್ನು ಸಚಿವರ ಕಾರಿನ ಜೊತೆ ಅಧಿಕಾರಿಗಳ ಕಾರು ಹಾಗೂ ಕಾಂಗ್ರೆಸ್ ಬೆಂಬಲಿಗರ ಕಾರುಗಳಿಗೂ ಜಿರೋ ಟ್ರಾಫಿಕ್ ನೀಡಿದ್ದು, ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಜಿಲ್ಲಾ ಪಂಚಾಯಿತಿ ಸಭೆ ಮುಗಿಸಿ […]

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ

ಬೆಂಗಳೂರು: ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಎಂತಹ ರಾಜಕೀಯ ಪಕ್ಷದ ಶಕ್ತಿ ಇದ್ದರೂ ಕ್ರಮಕೈಗೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಹಿಂದೂ, ಮುಸ್ಲಿಂ ಅಥವಾ ಮೈನಾರಿಟಿ ಇರಬಹುದು. ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತದೆ ಎಂದರು. ನಾವು ಕೊಟ್ಟ ಭಾಗ್ಯಗಳಲ್ಲಿ ಜಾತಿ ಧರ್ಮ ಇದೆಯಾ? ಹೌದು, ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಇನ್ನು ಶಕ್ತಿ ಯೋಜನೆ ಸೇರಿದಂತೆ ಗೃಹಜ್ಯೋತಿ, ಅನ್ನಭಾಗ್ಯ, […]

ಚಂದ್ರಯಾನ 3 ಹೆಸರಿಟ್ಟು ರೈಸ್ ಪುಲ್ಲಿಂಗ್! 3 ಕೋಟಿ ರೂಪಾಯಿ ಪಂಗನಾಮ

ಹೈದರಾಬಾದ್: ಹೈದರಾಬಾದ್, ಸೆಪ್ಟೆಂಬರ್ 20: ಬ್ಲಫ್ ಮಾಸ್ಟರ್ ಸಿನಿಮಾದಲ್ಲಿ ನೋಡಿದ ಈ ದೃಶ್ಯ ನೆನಪಿಗೆ ಬರುತ್ತದೆ.. ನಿಜ ಹೈದರಾಬಾದ್ ನಲ್ಲಿ ಸೇಮ್ ಟು ಸೇಮ್ ಘಟನೆ ನಡೆದಿದೆ. ರೈಸ್ ಪುಲ್ಲಿಂಗ್ ಹೆಸರಲ್ಲಿ ಕೇಡಿಗಳು ದುಡ್ಡು ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗೆ ತಾಮ್ರದ ಚೆಂಬು ಆಸೆ ತೋರಿಸಿ, 3 ಕೋಟಿ ರೂಪಾಯಿಗೆ ಪಂಗನಾಮ ಹಾಕಿದ್ದಾರೆ. ಘಟನೆಯ ವಿವರ ಇಂತಿದೆ. ವಿಜಯಕುಮಾರ್ ಮೇಡಿಪಲ್ಲಿಯ ಕ್ಷೌರಿಕ. ಇತ್ತೀಚೆಗೆ ಆಡಂಬರದ ಜೀವನಕ್ಕೆ ಒಗ್ಗಿಹೋಗಿದ್ದಾನೆ. ವಿಜಯ್​, ಪಂಜಾಗುಟ್ಟದ ಪಬ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಅವರನ್ನು […]

ಪರೋಕ್ಷವಾಗಿ ಅನ್ಯ ಕೋವಿನವರ ವಿರುದ್ಧ ಯತ್ನಾಳ ಕಿಡಿ

ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಹಾಕಲಾಗಿದ್ದ ಗಣೇಶೋತ್ಸವ ಶುಭಾಶಯದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಗಲಾಟೆ ಆಗುವುದು ಅವರಿಂದಲೇ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಕೂಡಲೇ ಕರ್ನಾಟಕದಲ್ಲಿ ಅವರಿಗೆ ಬಲಬಂದಂತಾಗಿದೆ. ಅವರಿಗೆ ಪಾಕಿಸ್ತಾನದ ಆಡಳಿತ ಬಂದಂತಾಗಿದೆ. ನಾನು 1994 ರಲ್ಲಿ ಶಾಸಕನಾದ ನಂತರ ಯಾವುದೇ ಕೋಮು ಗಲಾಟೆಯಾಗಿಲ್ಲ. ಹಿಂದೆ ಕೋಮು ಸೌಹಾರ್ದತೆ ಕೆಡಿಸುವಂತಹ ಅನೇಕ ಘಟನೆಗಳು ನಡೆದಿದೆ ಆದರೆ ಈಗ ಆಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಕಿಡಿ ಕಾರಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ […]

ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು

SHARE ಬೆಂಗಳೂರು/ ದಾವಣಗೆರೆ: ಕಾಂಗ್ರೆಸ್‌ನಲ್ಲಿ ಡಿಸಿಎಂ ಕೂಗು ಎದ್ದಿತ್ತು. ಆದರೆ ಈಗ ಲಿಂಗಾಯತ ಸಿಎಂ ಕೂಗು ಎದ್ದಿದೆ. ಡಿಸಿಎಂ ತಗೊಂಡು ಏನ್ ಮಾಡಬೇಕು ಆದರೆ ಲಿಂಗಾಯತರು ಸಿಎಂ ಆಗಬೇಕು ಎಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇರವಾಗಿಯೇ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.  ನಿಜಲಿಂಗಪ್ಪ, ಜೆ.ಎಚ್.ಪಾಟೇಲರು ಇದ್ದಾಗ ಎಲ್ಲರೂ ಚೆನ್ನಾಗಿದ್ದರು. ಈಗ ನಮ್ಮವರು ಕಂಗಾಲಾಗಿದ್ದಾರೆ. […]

ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? 

‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಮಂಗಳೂರಿನ ಬೆಡಗಿ ಮೇಘಾ ಶೆಟ್ಟಿ ಅವರು ಬಿಗ್ ಬಾಸ್ ಮನೆ ಆಟಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಗ್ಲ್ಯಾಮರ್ ಗೊಂಬೆ ಮೇಘಾ ಶೆಟ್ಟಿ ಎಂಟ್ರಿ ಬಗ್ಗೆ‌ ಈಗ ಸ್ಪಷ್ಟನೆ ಸಿಕ್ಕಿದೆ. ಕಿರುತೆರೆ ಲೋಕಕ್ಕೆ ಮೇಘಾ ಎಂಟ್ರಿ ಬಳಿಕ ಪ್ರತಿ ಬಿಗ್ ಬಾಸ್ ಸೀಸನ್‌ನಲ್ಲಿಯೂ ಮೇಘಾ ಶೆಟ್ಟಿ ಹೆಸರು ತಳುಕು ಹಾಕಿಕೊಳ್ಳುತ್ತಿತ್ತು. ಅದರಂತೆಯೇ ಈ ಬಾರಿ ಕೂಡ ದೊಡ್ಮನೆ […]

ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಜೊತೆ ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದರು. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ತರಾಟೆಗೆ ತೆಗೆದುಕೊಂಡಿದ್ದರು. ನೆಟ್ಟಿಗರ ಕಾಮೆಂಟ್ಸ್‌ಗೆ ಮತ್ತು ಟ್ರೋಲ್‌ಗೆ ಇದೀಗ ಕಿಶನ್ ಖಡಕ್ ಉತ್ತರ ನೀಡಿದ್ದಾರೆ.  ಕಿರಿಕ್‌ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ- ಕಿಶನ್ ಬಿಳಗಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಜಂಗ್ಲಿ ಸಿನಿಮಾದ ‘ನೀನೆಂದರೆ […]

ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ

ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ಬಂಧನದ ವಿಚಾರ ತಿಳಿದು ಬಹಳ ಸಂತೋಷವಾಗಿದೆ. ಆತನನ್ನು ಬ್ರೈನ್ ವಾಷ್ ಮಾಡಿ ಆಯುಧವಾಗಿ ಸಿದ್ಧಮಾಡಿದ ವ್ಯವಸ್ಥೆ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದ್ದಾರೆ. `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಆರೋಪಿ ಪ್ರತಿ ಸಲ ಪತ್ರ ಬರೆಯುವಾಗ ನಾನು ಅದನ್ನ ಬೆದರಿಕೆ ಪತ್ರ ಎಂದುಕೊಳ್ಳುತ್ತಿರಲಿಲ್ಲ. ಬದಲಿಗೆ ಪ್ರೇಮ ಪತ್ರ ಎಂದು ತಿಳಿದುಕೊಳ್ಳುತ್ತಿದ್ದೆ. ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ (CCB) ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ […]