October 29, 2026
#ಬೆಂಗಳೂರು

ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ

ಬೆಂಗಳೂರು: ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತವಾಗಿ ಸಾವನ್ನಪ್ಪಿದ ಘಟನೆ ಕೋರಮಂಗಲದ 100 ಫೀಟ್ ರಸ್ತೆಯಲ್ಲಿ ನಡೆದಿದೆ.

https://imasdk.googleapis.com/js/core/bridge3.609.0_en.html#goog_131549821

ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ನಗರದೊಳಗೆ ಬಂದಿದ್ದ ಜಿಂಕೆ ಅಪಘಾತವಾಗಿ (Accident) ಮೃತಪಟ್ಟಿದೆ. ಅಪರಿಚಿತ ವಾಹನಕ್ಕೆ ಸಿಲುಕಿ ಗಂಡು ಜಿಂಕೆ ಸಾವನ್ನಪ್ಪಿದ್ದು, ಆರ್ಮಿ ಫೋರ್ಸ್ ರಸ್ತೆ ಬಳಿ ಘಟನೆ ನಡೆದಿದೆ. 

ವಿಷಯ ತಿಳಿದ ತಕ್ಷಣ ಅಪಘಾತ ನಡೆದ ಜಾಗಕ್ಕೆ ಗ್ರೀನ್ ಆರ್ಮಿ ಫೋರ್ಸ್ ಧಾವಿಸಿ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಿಂಕೆ ಕೊನೆಯುಸಿರೆಳೆದಿತ್ತು. ಸದ್ಯ ಜಿಂಕೆಯ ಮೃತದೇಹವನ್ನು ಜಾಗೃತದಳ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದೆ.

Leave a comment

Your email address will not be published. Required fields are marked *