July 29, 2026
#ಬೆಂಗಳೂರು

ವಿದೇಶಿ ಮಹಿಳೆಯ ಬ್ಯಾಗ್‍ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!

ಬೆಂಗಳೂರು/ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಪೋರ್ಟ್ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಿದೇಶಿ ಮಹಿಳೆ ಬಳಿ ಇದ್ದ ಕಂತೆ ಕಂತೆ ದೇಶಿ ಹಣವನ್ನ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮೂಲದ ಮಹಿಳೆಯ ಬ್ಯಾಗ್‍ನಲ್ಲಿ 15 ಲಕ್ಷ ನಗದು ಹಣ ಪತ್ತೆಯಾಗಿದೆ. ಲಗೇಜ್ ಸ್ಕ್ಯಾನಿಂಗ್ ವೇಳೆ ಹಣ ಪತ್ತೆಯಾಗಿದ್ದು ಹಣದ ಸಮೇತ ಮಹಿಳೆಯನ್ನ ವಶಕ್ಕೆ ಪಡೆದಿರುವ ಏರ್ಪೋಟ್ ಭದ್ರತಾ ಸಿಬ್ಬಂದಿ ನಂತರ ಹಣ ಹಾಗೂ ಮಹಿಳೆಯನ್ನ ಆಧಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಹಿಳೆಯನ್ನ ಹೆಚ್ಚಿನ ವಿಚಾರಣೆ ಹಣದ ಆಸಲಿಯತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Leave a comment

Your email address will not be published. Required fields are marked *