October 29, 2026
#ಚಲನಚಿತ್ರ

ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ

ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬಂದು 28 ವರ್ಷಗಳು ಸಂದಿವೆ. ಈ ದಿನವನ್ನು ಅವರು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ತಾಯವ್ವನನ್ನು ನೆನಪಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚಾಲನೆ ನೀಡಿದ್ದ ಅಂಬರೀಶ್ ಸೇರಿದಂತೆ ಹಲವು ನೆನಪುಗಳನ್ನು ಕಿಚ್ಚ ನೆನೆದಿದ್ದಾರೆ.
ತಾಯವ್ವ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟವರು ಸುದೀಪ್, ನಂತರ ಸಾಕಷ್ಟು ಚಿತ್ರಗಳನ್ನು ಮಾಡಿದವರು. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಿರೂಪಕರಾಗಿ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕೇವಲ ಕನ್ನಡದ ನಟರಾಗಿ ಉಳಿಯದೇ, ತೆಲುಗು, ತಮಿಳು, ಹಿಂದೆ ಚಿತ್ರಗಳಲ್ಲೂ ಸುದೀಪ್ ನಟಿಸಿದ್ದಾರೆ. ಸದ್ಯ ಅವರು ಪ್ಯಾನ್ ಇಂಡಿಯಾ ಹೀರೋ.
ಸಿನಿಮಾ ರಂಗಕ್ಕೆ ಸುದೀಪ್ ಬಂದಾಗ ಐರೆನ್ ಲೆಗ್ ಎಂದು ಕರೆದ ಜನರೂ ಇದ್ದಾರೆ. ಇದೀಗ ಸುದೀಪ್ ಗೋಲ್ಡನ್ ಲೆಗ್. ಹಾಗಾಗಿ ತನ್ನ ಗೆಲುವಿಗೆ ಕಾರಣರಾದವರನ್ನು ಸುದೀಪ್ ಸ್ಮರಿಸಿದ್ದಾರೆ.

Leave a comment

Your email address will not be published. Required fields are marked *