July 29, 2026
#ಬೆಂಗಳೂರು

ಯತ್ನಾಳ್, ಹರಿಪ್ರಸಾದ್​ ಸೇರಿ ಪಕ್ಷ ಆರಂಭಿಸುವುದು ಒಳ್ಳೆಯದು

ಬೆಂಗಳೂರು: ಮಾಜಿ ಸಚಿವ ಬಿಸಿ ಪಾಟೀಲ್ ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್​ (BK Hariprasad) ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್  ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ವಿಕೃತ ಮನಸು ಹೊಂದಿರುವ ಬಿ.ಕೆ.ಹರಿಪ್ರಸಾದ್​​ ಮತ್ತು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇಬ್ಬರೂ ಸೇರಿ ಒಂದು ಪಕ್ಷ ಆರಂಭಿಸುವುದು ಒಳ್ಳೆಯದು ಅಂತ ನನ್ನ ಭಾವನೆ” ಎಂದು ಬಿ.ಸಿ.ಪಾಟೀಲ್ ಟ್ವೀಟ್​​​ ಮಾಡಿದ್ದಾರೆ.

https://813220dbae6acbcae5600452f0f77269.safeframe.googlesyndication.com/safeframe/1-0-40/html/container.html

‘”ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ನಾನು ಬಸವನಗೌಡ ಪಾಟೀಲ್ ಅಂದರೆ ಬಿಸಿ ಪಾಟೀಲ್. ಏನು ಪಾಟೀಲ್ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು” ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಾಗ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕನ ಸ್ಥಾನ ದೂರೆಯದೆ ಕಂಗಲಾಗಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್​ ಕೂಡಾ ಬಿವೈ ವಿಜಯೇಂದ್ರ ಹಾಗೂ ಆರ್​ ಅಶೋಕ್ ವಿರುದ್ಧ ಹೇಳಿಕೆ ನೀಡುತ್ತಾ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್​ ಸಾಮಾಜಿಕ ಜಾಲತಾಣ ಎಕ್ಸ್​ (ಟ್ವಿಟರ್​​) ನಲ್ಲಿ ಬಿಕೆ ಹರಿಪ್ರಸಾದ ಮತ್ತು ಬಸನಗೌಡ ಪಾಟೀಲ್​ ಯತ್ನಾಳ್​ ಅವರ ಕಾಲು ಎಳೆದಿದ್ದಾರೆ.

Leave a comment

Your email address will not be published. Required fields are marked *