September 13, 2026
#ಬೆಂಗಳೂರು

ಸಿದ್ದರಾಮಯ್ಯ ನಿರ್ಧಾರ ಖಂಡಿಸ್ತೇನೆ

ಬೆಂಗಳೂರು: ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ನಿರ್ಧಾರವನ್ನ ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://imasdk.googleapis.com/js/core/bridge3.609.1_en.html#goog_1734284798

ನಗರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ಈ ನಿರ್ಧಾರವನ್ನ ಖಂಡಿಸುತ್ತೇನೆ. ಇದು ಶೋಭೆ ತರುವಂತಹದ್ದಲ್ಲ, ಅಧಿಕಾರ ಇದೆ ಅಂತ ರಾಜಕೀಯ ದೊಂಬರಾಟ ಮಾಡಲು ಹೊರಟಿದ್ದಾರೆ. ನೋಡೋಣ ಎಲ್ಲಿಯವರೆಗೆ ಇದೇ ರೀತಿ ಮಾಡ್ತಾರೆ ಅಂತ. ಬಿಜೆಪಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ವಿಚಾರ ಇಲ್ಲ, ಜನರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಶಾಲೆಗಳಲ್ಲಿ ಹಿಜಬ್‌ ನಿಷೇಧ ವಾಪಸ್‌ ಪಡೆಯಬೇಕೆಂಬ ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸ್ತೇನೆ. ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ. ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದಾರೆ. ಈಗಲೇ ಎಚ್ಚೆತ್ತು ತೀರ್ಮಾನ ವಾಪಸ್‌ ಪಡೆಯಬೇಕು ಎಂದು ಎಚ್ಚರಿಸಿದ್ದಾರೆ. 

ಕಾಂಗ್ರೆಸ್‌ ಸರ್ಕಾರ ಭಂಡ ಸರ್ಕಾರ, ಹಿಜಬ್ ವಾಪಸ್ ಪಡೆಯಿರಿ ಅಂತ ಯಾವ ಮುಸ್ಲಿಂ ನಾಯಕರು ಹೇಳಿದ್ರು ಇವರಿಗೆ? ಅವರ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಈರೀತಿ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಬರಗಾಲವನ್ನು ಮರೆತೇ ಬಿಟ್ಟಿದೆ ಸರ್ಕಾರ. ಕೂಡಲೇ ಹಿಜಬ್ ನಿಷೇಧ ವಾಪಸ್ ನಿರ್ಣಯ ಹಿಂದಕ್ಕೆ ಪಡಯಲಿ ಎಂದು ಹೇಳಿದ್ದಾರೆ. 

Leave a comment

Your email address will not be published. Required fields are marked *