ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆಗೆ ರಿಲೀಫ್
ಬೆಂಗಳೂರು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ.
ನ್ಯಾ.ರಾಜೇಂದ್ರ ಬಾದಾಮಿ ಅವರು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ಬಲವಂತದ ಕ್ರಮವನ್ನು ಜರುಗಿಸಬಾರದು ಎಂದು ಸೂಚನೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ದೂರು ನೀಡಿಲ್ಲ. ರಾಜಕೀಯ ವ್ಯಕ್ತಿ ದೂರು ನೀಡಿರುವುದು. ಜಾತಿನಿಂದನೆ ಮಾಡಿಲ್ಲ. ಜಾತಿನಿಂದನೆ ಹಾಕಲು ಸಾಧ್ಯವಿಲ್ಲ ಎಂದು ವಕೀಲ ಅರುಣ್ ಶಾಂ ವಾದ ಮಂಡಿಸಿದ್ದರು. ವಾದ ಆಲಿಸಿದ ಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ.
‘ಅಯೋಗ್ಯ’ ಎಂದು ಸೂಲಿಬೆಲೆ ಪೋಸ್ಟ್
ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಅವರು, ‘ಅಯೋಗ್ಯ’ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.








































































































































































































































































































































































































































































































































































































































































































































































































































































































































































































































































































































