September 13, 2026
#ಬೆಂಗಳೂರು

ರಾಜ್ಯದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭ

ಬೆಂಗಳೂರು: ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ 2ನೇ ಲಸಿಕೆ ಪಡೆದವರಿಗೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಸರಬರಾಜು ಮಾಡಿದೆ.

https://imasdk.googleapis.com/js/core/bridge3.609.1_en.html#goog_969661537

ಈ ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆಯಾಗಿ ನೀಡಬಹುದು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು. 

60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ. 

ಯಾವ ಜಿಲ್ಲೆಗೆ ಎಷ್ಟು ಕಾರ್ಬೆವ್ಯಾಕ್ಸ್ ಡೋಸ್ ಹಂಚಿಕೆ?
ಬೆಂಗಳೂರು ನಗರ-840, ಬೆಂಗಳೂರು ಗ್ರಾಮಾಂತರ-480, ಬಿಬಿಎಂಪಿ-5,680, ಚಿಕ್ಕಬಳ್ಳಾಪುರ-520, ಕೋಲಾರ-680, ರಾಮನಗರ-440, ತುಮಕೂರು-1,300, ಬೆಳಗಾವಿ-2,280, ಧಾರವಾಡ-920, ಹಾವೇರಿ-780, ಉತ್ತರ ಕನ್ನಡ-660, ಬಳ್ಳಾರಿ-640, ಚಿತ್ರದುರ್ಗ-720, ದಾವಣಗೆರೆ-740, ಶಿವಮೊಗ್ಗ-820,ವಿಜಯನಗರ-560, ಬಾಗಲಕೋಟೆ-900, ವಿಜಯಪುರ-1,000, ಗದಗ-500, ಕೊಪ್ಪಳ-520, ಚಾಮರಾಜನಗರ-440, ಹಾಸನ-720, ಕೊಡಗು-220, ಮಂಡ್ಯ-720, ಮೈಸೂರು-1,360, ಚಿಕ್ಕಮಗಳೂರು-480, ದಕ್ಷಿಣ ಕನ್ನಡ-1,140, ಉಡುಪಿ-520, ಬೀದರ್-840, ಕಲಬುರಗಿ-1,280, ರಾಯಚೂರು-820, ಯಾದಗಿರಿ-480 ಡೋಸ್ ಹಂಚಲಾಗಿದೆ. ಒಟ್ಟು 30,000 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ.

Leave a comment

Your email address will not be published. Required fields are marked *