September 13, 2026
#ಚಲನಚಿತ್ರ

ಮಲೇಷಿಯಾದಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಮಲೇಷಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೇಷಿಯಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೆಚ್ಚಿನ ನಟನನ್ನು ಅಲ್ಲಿನ ಅಭಿಮಾನಿಗಳು ಸಂಭ್ರಮದಿAದ ಸ್ವಾಗತಿಸಿದ್ದಾರೆ. ಹುಟ್ಟು ಹಬ್ಬದ ದಿನದಂದು ನಡೆದ ಅಭಿಮಾನಿಗಳ ದುರಂತ ಅಂತ್ಯದ ನೋವಿನಲ್ಲಿದ್ದ ಯಶ್, ಇದೀಗ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಹಾಗAತ ಅವರು ಮಲೇಷಿಯಾಗೆ ಹೋಗಿದ್ದು, ಶೂಟಿಂಗಾಗಿ ಅಲ್ಲ, ಖಾಸಗಿ ಸಮಾರಂಭದಲ್ಲಿ ಭಾಗಿ ಆಗುವುದಕ್ಕಾಗಿ ಯಶ್ ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಅವರು ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ.
ಟಾಕ್ಸಿಕ್ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದೆ. ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕು. ಬಹುತೇಕ ಶೂಟಿಂಗ್ ವಿದೇಶದಲ್ಲಿ ನಡೆಯಲಿದ್ದು, ಕೆಲವು ಭಾಗಗಳನ್ನು ಮಾತ್ರ ಈ ನೆಲದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎನ್ನುವುದು ಹರಿದಾಡುತ್ತಿರುವ ಮಾಹಿತಿ. ಇದಕ್ಕೆ ಚಿತ್ರತಂಡವೇ ಸ್ಪಷ್ಟನೆ ಕೊಡಬೇಕಿದೆ.

Leave a comment

Your email address will not be published. Required fields are marked *