July 29, 2026
#Uncategorized

 ಅಪ್ಸರೆಯಂತೆ ಮಿಂಚಿದ ‘ಕಾಂತಾರ’ ಬ್ಯೂಟಿ

ವೈಟ್‌ ಡ್ರೆಸ್‌ನಲ್ಲಿ ಅಪ್ಸರೆಯಂತೆ ಮಿಂಚಿದ ‘ಕಾಂತಾರ’ ಬ್ಯೂಟಿ

ನ್ನಡದ ನಟಿ ಸಪ್ತಮಿ ಗೌಡ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಬಿಳಿ ಬಣ್ಣದ ಉಡುಗೆಯಲ್ಲಿ ‘ಕಾಂತಾರ’ ಬ್ಯೂಟಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಪ್ತಮಿ ನಯಾ ಲುಕ್‌ನಲ್ಲಿರೋ ಫೋಟೋಸ್ ಸದಾ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ.

https://imasdk.googleapis.com/js/core/bridge3.590.0_en.html#goog_355452902

ಕಾಂತಾರ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿರೋ ಮೂಗುತಿ ಸುಂದರಿ ಸಪ್ತಮಿ, ಇತ್ತೀಚೆಗೆ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಅಪ್ಸರೆಯಂತೆ ಸಪ್ತಮಿ ಕಂಗೊಳಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

2023ರ ಸೈಮಾ ಅವಾರ್ಡ್ ಸಮಾರಂಭದಲ್ಲಿ ಬೆಸ್ಟ್ ನಟಿ ಅವಾರ್ಡ್‌ ಸಪ್ತಮಿ ಗೌಡ ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ವೈಟ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೂಲಕ ಇದೀಗ ಬಾಲಿವುಡ್‌ಗೆ ಲಗ್ಗೆ ಇಡ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ ಕಾಳಿ ಸಿನಿಮಾ, ಯುವ ಚಿತ್ರ, ಉತ್ತರಾಕಾಂಡ ಸೇರಿದಂತೆ ಹಲವು ಸಿನಿಮಾಗಳು ಕಾಂತಾರ ಬ್ಯೂಟಿ ಕೈಯಲ್ಲಿವೆ.

Leave a comment

Your email address will not be published. Required fields are marked *