July 29, 2026
#ಬೆಂಗಳೂರು

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಲವರಿಗೆ ನೋಟಿಸ್ ಜಾರಿ

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚುರುಕುಗೊಂಡ ಸಿಸಿಬಿ ತನಿಖೆ, ಹಲವರಿಗೆ ನೋಟಿಸ್ ಜಾರಿ

ಬೆಂಗಳೂರು: ಚೈತ್ರಾ ಕುಂದಾಪುರ ಮತ್ತು ತಂಡ ಎಸಗಿದ ವಂಚನೆ ಪ್ರಕರಣ ಸಂಬಂಧ ಸಿಸಿಬಿ  ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಅಭಿನವ ಹಾಲಶ್ರೀ ತನಿಖೆ ಆರಂಭಿಸಿದ ತನಿಖಾಧಿಕಾರಿಗಳು ಮತ್ತಷ್ಟು ಮಂದಿಗೆ ನೋಟಿಸ್ ಜಾರಿ ಮಾಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಅವರನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ತನಿಖಾಧಿಕಾರಿಗಳು, ಸ್ವಾಮೀಜಿ ಕಡೆಯಿಂದ ಹಣ ಜಪ್ತಿ ಮಾಡುವ ಹಿನ್ನೆಲೆ ಕರೆದುಕೊಂಡು ಹೋಗಿದ್ದರು. ಇದರ ನಡುವೆ ಹಲವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

ಹಾಲಶ್ರೀ ಆಪ್ತರಾಗಿರುವ ತಿಪ್ಪೇಸ್ವಾಮಿ, ಲಕ್ಷ್ಮಣ ಮತ್ತು ಪ್ರಣವ್ ಪ್ರಸಾದ್​ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಚೈತ್ರಾ ಆಪ್ತನಾದ ಮಂಜು ಎಂಬಾತನಿಗೂ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲರಿಗೂ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಚೈತ್ರಾ ಅಂಡ್ ಗ್ಯಾಂಗ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಹಾಲಶ್ರೀ ಈಗ ಸಿಸಿಬಿ ಕಸ್ಟಡಿಗೆ ಸಿಕ್ಕಿದ್ದು, ಮತ್ತೊಂದೆಡೆ ವಿಚಾರಣೆಗೆ ಸ್ಪಂದಿಸಿದೇ ಆಸ್ಪತ್ರೆ ಸೇರಿದ್ದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಆಗಿದೆ. ಹೀಗಾಗಿ ಪ್ರಕರಣದ ತನಿಖೆಯ ಅಸಲಿ ಆಟ ಈಗ ಶುರುವಾಗಲಿದೆ.

Leave a comment

Your email address will not be published. Required fields are marked *