July 27, 2026
#ಬೆಂಗಳೂರು

ಶಾಂತಲಾ ಸಿಗ್ನಲ್​ನಲ್ಲಿ 2 ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ದೊಣ್ಣೆಯಿಂದ ದಾಳಿ; ಇಬ್ಬರು ವಶ

ಬೆಂಗಳೂರು: ನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ​ ಮೇಲೆ ಕಲ್ಲು ತೂರಾಟವಾಗಿದೆ. ಬೆಂಗಳೂರಿನ ಶಾಂತಲಾ ಸಿಗ್ನಲ್​ನಲ್ಲಿ ನಿನ್ನೆ ಮಧ್ಯ ರಾತ್ರಿ 2 ಕೆಎಸ್​ಆರ್​ಟಿಸಿ ಬಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. KSRTC ಬಸ್​ಗಳ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದಾರೆ. ಎರಡು KSRTC ಬಸ್​ಗಳ ಗ್ಲಾಸ್​ಗಳು ಪುಡಿ ಪುಡಿಯಾಗಿವೆ. ಇಮ್ರಾನ್ ಮತ್ತು ಆರೀಫ್ ಎಂಬ ಇಬ್ಬರು ಕಿಡಿಗೇಡಿಗಳು ದೊಣ್ಣೆಯಿಂದ ಗ್ಲಾಸ್ ಹೊಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 2 KSRTC ಬಸ್​ಗಳು ಶಾಂತಲಾ ಸಿಗ್ನಲ್​ ಬಳಿ ನಿಂತಿವೆ. ಹಿಂದೆಯೇ 1 ಆಟೋ, ಎರಡು ಬೈಕ್​ಗಳಲ್ಲಿ ಬಂದಿದ್ದ ಐವರು ಪುಂಡರು ಏಕಾಏಕಿ ರಾಡ್​, ದೊಣ್ಣೆ, ಕಲ್ಲುಗಳಿಂದ ಕೆಎಸ್​ಆರ್​ಟಿಸಿ ಬಸ್​ನ ಗಾಜು ಹೊಡೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮಧ್ಯರಾತ್ರಿ 1.45ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆ ನಡೆಯಲು ಕಾರಣ ಏನು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯ ಕಾಟನ್ ಪೇಟೆ ಪೊಲೀಸರು ಇಮ್ರಾನ್ ಮತ್ತು ಆರೀಫ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *