ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ
ಬೆಂಗಳೂರು: ಕೋರಮಂಗಲದ ಕೆಫೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೇ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಲ್ಲಿಯವರೆಗೆ ನಗರದ 54 ಪಬ್‌ಗಳಿಗೆ ಬೀಗ ಹಾಕಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 6 ದಿನಗಳಿಂದ ಒಟ್ಟು 1,058 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ 492 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಬುಧವಾರ ಒಂದೇ ದಿನ 234 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸಿದ್ದು, ಅವುಗಳ ಪೈಕಿ 122 ಕ್ಕೆ ನೋಟಿಸ್ ನೀಡಿದೆ. 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೀಗ ಹಾಕಿ ಬಂದ್ ಮಾಡಲಾಗಿದೆ.
ಯಾವತ್ತು ಎಷ್ಟು ರೆಸ್ಟೋರೆಂಟ್‌ಗೆ ನೋಟಿಸ್?
ಶುಕ್ರವಾರ (ಅ.20) – 12, ಶನಿವಾರ (ಅ.21) – 21, ಭಾನುವಾರ (ಅ.22) – 10, ಸೋಮವಾರ (ಅ.23) – 5, ಬುಧವಾರ (ಅ.25) – 6 ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗೆ ನೋಟಿಸ್ ನೀಡಿ ಬೀಗ ಜಡಿಯಲಾಗಿದೆ.













































































































































































































































































































































































































































































































































































































































































































































































































































































































































































































































































































































