July 29, 2026
#ಜಿಲ್ಲೆ

ಕೆರಗೋಡು ಗ್ರಾಮದ ಮನೆ ಮನೆಗಳ ಮೇಲೆ ಹನುಮ ಧ್ವಜ

ಮಂಡ್ಯ:
ಕೆರಗೋಡು ಹನುಮಧ್ವಜ ವಿವಾದದ ಈಗ ಅಭಿಯಾನದ ಸ್ವರೂಪ ಪಡೆದುಕೊಂಡಿದೆ. ಕೆರಗೋಡು ಗ್ರಾಮಸ್ಥರು ಹನುಮ ಧ್ವಜ ಅಭಿಯಾನಕ್ಕೆ ಮುಂದಾಗಿದ್ದಾರೆ. ಗ್ರಾಮದ ಹೃದಯ ಭಾಗದಲ್ಲಿ ಹನುಮ ಧ್ವಜ ಹಾರಿಸಲು ಸರ್ಕಾರ ಅನುಮತಿ ನೀಡಿಲ್ಲ. ಈ ಹಿನ್ನೆಲೆ ಗ್ರಾಮಸ್ಥರು ಮನೆಗಳ ಮೇಲೆ ಹನುಮಧ್ವಜ ಹಾಕಲು ಮುಂದಾಗಿದ್ದಾರೆ. ಉದ್ದೇಶ ಪೂರ್ವಕವಾಗಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಲಾಠಿ ಏಟಿನಿಂದಾದ ಗಾಯ ತೋರಿಸಿ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ಇವತ್ತು ಬೆಳಗ್ಗೆ ಬಿಜೆಪಿ ನಿಯೋಗ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.
ನಿನ್ನೆ ಕೆರಗೋಡು ಗ್ರಾಮಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿತ್ತು. ಈ ವೇಳೆ ಗ್ರಾಮದ ಪಾಪು ಎಂಬವರು ನಮಗೆ ಯಾವ ಬಾವುಟ ಬೇಡ ಎಂದು ಬೇಸರ ವ್ಯಕ್ತಪಡಿಸಿದರು.
ಹನುಮಧ್ವಜ ವಿವಾದದ ಹಿನ್ನೆಲೆ ಪಾಪು ಮತ್ತು ಅವರ ಅಪ್ರಾಪ್ತ ಮಗನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಬೆಳಗ್ಗೆ ಇಬ್ಬರನ್ನೂ ಪೊಲೀಸರು ಕಳುಹಿಸಿದ್ದಾರೆ. ಬಿಜೆಪಿ ನಿಯೋಗದ ಭೇಟಿ ವೇಳೆ ಪಾಪು ಕುಟುಂಬ ತಮ್ಮ ನೋವು ತೋಡಿಕೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಧಿಡೀರನೆ ರಾಷ್ಟ್ರ ಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
೨೦೧೧ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರ ಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂದಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ೭೫ ವರ್ಷಗಳ ನಂತರ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ.
ಕೇಸರಿ, ಕುಂಕುಮ ಕಂಡರೆ ನನಗೆ ಭಯ ಅಂತ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವ ತಮಗೆ ಹನುಮ ಧ್ವಜದ ಮೇಲಿನ ನಿಮ್ಮ ದ್ವೇಷವನ್ನ ಮರೆಮಾಚಲು ರಾಷ್ಟ್ರಧ್ವಜದ ಮುಖವಾಡ ಹಾಕಿಕೊಳ್ಳುವ ಅಗತ್ಯ ಏನಿದೆ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದ್ದಾರೆ.

Leave a comment

Your email address will not be published. Required fields are marked *