ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್
ಚಿಕ್ಕಮಗಳೂರು:
ಶೃಂಗೇರಿ ಮಠದಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗಾಗಿ ಅರಣ್ಯ ನಾಶಪಡಿಸಿರುವ ಆರೋಪದ ಮೇಲೆ ಶೃಂಗೇರಿ ಮಠದ ಗುತ್ತಿಗೆದಾರ ಸಂದೀಪ್ ವಿರುದ್ಧ ಈIಖ ದಾಖಲಾಗಿದೆ. ಶೃಂಗೇರಿ ಮಠದಿಂದ ಗುಡ್ಡದ ಮೇಲೆ ಶಂಕರಾಚಾರ್ಯರ ಪ್ರತಿಮೆ ಬಳಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಸಂದೀಪ್ ಅವರು ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಶೃಂಗೇರಿ ಮಠದಿಂದ ನಿರ್ಮಾಣವಾಗಿರುವ ಶಂಕರಾಚಾರ್ಯರ ಪ್ರತಿಮೆ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೆಳ ಭಾಗದಲ್ಲಿ ಮಣ್ಣು ಕುಸಿತ ಹಿನ್ನೆಲೆ ಮರಗಳ ಕಡಿದು ಕಾಂಪೌAಡ್ ಗೋಡೆ ನಿರ್ಮಾಣ ಮಾಡಲಾಗಿದೆ. ಶೃಂಗೇರಿ ಸಮೀಪದ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ ಎಅಃ ಬಳಸಿ ಕಾಮಗಾರಿ ಮಾಡಿದ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು ಕುಸಿದು ಬಿಳುತ್ತಿದೆ. ಸದ್ಯ ಕಾಮಗಾರಿಗೆ ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶೃಂಗೇರಿ fir ಶೃತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಅರಣ್ಯ ಇಲಾಖೆ ಜನವರಿ 2 ರಂದೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ನೂರಾರು ಮರಗಳ ಕಡಿತ, ಗುಡ್ಡ ನಾಶವಾದ ಹಿನ್ನೆಲೆ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗುತ್ತಿಗೆದಾರ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.














































































































































































































































































































































































































































































































































































































































































































































































































































































































































































































































































































































