September 13, 2026
#ಜಿಲ್ಲೆ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲಾ

ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳ ನಗರದಲ್ಲಿ ಮಾತನಾಡಿದ ಅವರು ‘ಆರು ಕೋಟಿ ತೊಂಬತ್ತು ಲಕ್ಷ ಜನರಿಗೆ ಬರೊಬ್ಬರಿ ಒಂದು ಲಕ್ಷ ಕೋಟಿ ಹಣ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು 96 ಲಕ್ಷ ಕೋಟಿ ಹಣ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದು ತಪ್ಪಲ್ಲ ಎಂದರು.

https://b0ee9c2ed8bc7b5c7f5d65a04fe10f7f.safeframe.googlesyndication.com/safeframe/1-0-40/html/container.html

ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?

ಇನ್ನು ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸೋದಿಲ್ಲ, ಮುಂದುವರಿಸುತ್ತೇವೆ. ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?. ಕೊಟ್ಟಿದ್ದನ್ನು ನಿಲ್ಲಿಸಲು ಆಗಲ್ಲ, ತಗೆಯಬಾರದು ಕೂಡ. ಲೋಕಸಭಾ ಚುನಾವಣೆ ಹಾಗೂ ಮುಂದಿನ ಚುನಾವಣೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಇರುತ್ತವೆ. ಗ್ಯಾರಂಟಿಯಿಂದ ಹಣದ ಬಾರವಿದೆ. ಆದ್ರೆ, ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ ನೈತಿಕತೆ ಮೌಲ್ಯ ಇಲ್ಲವೇ ಇಲ್ಲ

ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ನೀಡದೆ ಇದ್ದಾಗ ನಮ್ಮ ಪಕ್ಷಕ್ಕೆ ಬರಬಾರದಿತ್ತು, ಬಂದ ಮೇಲೆ ಮರಳಿ ಹೋಗಬಾರದಿತ್ತು. ಕಾಂಗ್ರೆಸ್​ಗೆ ಅವರು ಬಂದಿದ್ದು ಆತುರದ ನಿರ್ಧಾರ, ಈಗ ಹೋಗಿದ್ದು ಕೂಡ ಆತುರದ ನಿರ್ಧಾರವಾಗಿದೆ. ಇನ್ನು ರಾಜಕಾರಣ ಕೆಳಮಟ್ಟದಲಿದೆ. ಎಲ್ಲಾ ಪಕ್ಷದಲ್ಲಿ ಕೂಡ ನೈತಿಕತೆ ಮೌಲ್ಯ ತಗ್ಗಿದೆ. ಆದರೆ, ಬಿಜೆಪಿಯಲ್ಲಿ ಇಲ್ಲವೇ ಇಲ್ಲ. ಇವತ್ತೀನ ನಮ್ಮ ಸಂಖ್ಯಾಬಲದಲ್ಲಿ ನಮ್ಮನ್ನು ಯಾರು ಅಳುಗಾಡಿಸಲು ಆಗಲ್ಲ. ಇನ್ಮೇಲೆ ಕಾಂಗ್ರೆಸ್ ಬಿಟ್ಟು ಯಾರು ಹೋಗಲ್ಲ. ಇದೇ ವೇಳೆ ಕಾಂಗ್ರೆಸ್​ನಲ್ಲಿ ಹೊಂದಾಣಿಕೆ ಕೊರತೆ ವಿಚಾರ ‘ ಕೆಲವರು ನಮಗೆ ನಿಗಮ ಮಂಡಳಿ ಹುದ್ದೆ ವಿಚಾರದಲ್ಲಿ ಕೇಳಿಲ್ಲ ಅಂದಿದ್ದಾರೆ. ಅವರ ಹೇಳಿಕೆೆಯಲ್ಲಿ ತಪ್ಪೇನಿದೆ? ಅವರ ವಿಚಾರ ಅವರು ಹೇಳಿದ್ದಾರೆ ಎಂದರು.

Leave a comment

Your email address will not be published. Required fields are marked *