ತಾಯಿ-ಮಕ್ಕಳದ್ದು ಆತ್ಮಹತ್ಯೆಯಲ್ಲ, ಕೊಲೆಹತ್ಯೆ ಹಿಂದೆ ‘ರೀಲ್ಸ್ ಪ್ರಿಯತಮ’!
ಹಾಸನ:
ಹೊಸವರ್ಷದಂದು ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜನವರಿ ೧ರಂದು ದಾಸರಕೊಪ್ಪಲಿನ ಮನೆಯಲ್ಲಿ ಶಿವಮ್ಮ ಎಂಬ ಮಹಿಳೆ ಹಾಗೂ ಆಕೆ ಮಕ್ಕಳಾದ ೧೦ ವರ್ಷದ ಪವನ್ ಹಾಗೂ ೭ ವರ್ಷದ ಸಿಂಚನಾ ನಿಗೂಢವಾಗಿ ಸಾವನ್ನಪ್ಪಿದ್ದರು. ಪತಿ ತೀರ್ಥಪ್ರಸಾದ್ ಮನೆಗೆ ಬಂದು ನೋಡಿದಾಗ ಗ್ಯಾಸ್ ಲೀಕ್ ಆಗಿದ್ದು, ಹೆಂಡತಿ, ಮಕ್ಕಳು ಸಾವನ್ನಪ್ಪಿದ್ದರು. ಇದೀಗ ಪೊಲೀಸ್ ತನಿಖೆ ವೇಳೆ ಮೂವರದ್ದು ಕೊಲೆ ಎನ್ನುವುದು ಗೊತ್ತಾಗಿದೆ. ಮಹಿಳೆಯ ಪ್ರಿಯಕರನೇ ನ್ಯೂ ಇಯರ್ ಪಾರ್ಟಿಗೆ ಅಂತ ಮನೆಗೆ ಬಂದು, ಮೂವರನ್ನೂ ಹತ್ಯೆ ಮಾಡಿರೋ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ರೀಲ್ಸ್ ಪ್ರಿಯಕರನಿಂದ ತಾಯಿ, ಮಕ್ಕಳ ಹತ್ಯೆ
ತಾಯಿ, ಎರಡು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಯಿ, ಮಕ್ಕಳದ್ದು ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ಗೊತ್ತಾಗಿದೆ. ಕೊಲೆಯಾದ ಶಿವಮ್ಮ ಜೊತೆ ರೀಲ್ಸ್ ಪ್ರೇಮಿಯೊಬ್ಬ ಅಕ್ರಮ ಸಂಬAಧ ಹೊಂದಿದ್ದನAತೆ. ಆತೇ ಕೊಲೆ ಮಾಡಿದ್ದು, ಇದೀಗ ಅರೆಸ್ಟ್ ಆಗಿದ್ದಾನೆ. ತನಿಖೆ ವೇಳೆ ಆರೋಪಿ ಹಲವು ಸ್ಪೋಟಕ ವಿಚಾರ ಬಾಯ್ಬಿಟ್ಟಿದ್ದಾನೆ.
ಅಕ್ರಮ ಸಂಬAಧ ಹೊಂದಿದ್ದ ಆರೋಪಿ
ವಿಜಯಪುರ ಮೂಲದ, ೩೬ ವರ್ಷದ ನಿಂಗಪ್ಪ ಕಾಗವಾಡ ಎಂಬಾತನೇ ಕೊಲೆ ಆರೋಪಿ. ಈತ ಶಿವಮ್ಮ ಜೊತೆ ಅಕ್ರಮ ಸಂಬAಧ ಹೊಂದಿದ್ದು, ಆಕೆಯ ಜೊತೆಯಲ್ಲೆ ವಾಸವಿದ್ದ ಎನ್ನಲಾಗಿದೆ.
ವಿಜಯಪುರದಲ್ಲಿದ್ದಾಗ ಮಹಿಳೆಗೆ ಆರೋಪಿ ಪರಿಚಯ
ಶಿವಮ್ಮ ಪತಿ ತೀರ್ಥ ಪ್ರಸಾದ್ ವಿಜಯಪುರದಲ್ಲಿ ಬೇಕರಿ ಇಟ್ಟಿದ್ದ. ಈ ವೇಳೆ ಶಿವಮ್ಮನಿಗೆ ಆರೋಪಿ ನಿಂಗಪ್ಪನ ಪರಿಚಯವಾಗಿತ್ತು. ಬಳಿಕ ವಿಜಯಪುರದಲ್ಲಿ ಬೇಕರಿ ಲಾಸ್ ಆಗಿದ್ದರಿಂದ, ಅದನ್ನು ಮುಚ್ಚಿದ್ದ ತೀರ್ಥ ಪ್ರಸಾದ್ ಹೆಂಡತಿ ಮಕ್ಕಳ ಜೊತೆ ಹಾಸನಕ್ಕೆ ವಾಪಸ್ ಬಂದಿದ್ದ.
ಪ್ರಿಯಕರನೊAದಿಗೆ ಸಂಬAಧ, ಪತಿಗೆ ದೋಖಾ!
ಬಳಿಕ ತುಮಕೂರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ಹಾಸನದಲ್ಲಿ ಪತ್ನಿ ಶಿವಮ್ಮ ಹಾಗೂ ಮಕ್ಕಳು ಇದ್ದರು. ಆದರೆ ದೂರವಿದ್ದ ಗಂಡನಿಗೆ ಮರೆಮಾಚಿ ಪ್ರಿಯಕರ ನಿಂಗಪ್ಪನ ಜೊತೆ ಶಿವಮ್ಮ ಹಾಸನದ ಮನೆಯಲ್ಲಿ ಸಲುಗೆಯಿಂದ ಇದ್ದಳು ಎನ್ನಲಾಗಿದೆ. ಕಾರು ಚಾಲಕ ಎಂದು ಶಿವಮ್ಮ ತನ್ನ ಪ್ರಿಯಕರ ನಿಂಗಪ್ಪನ ಪರಿಚಯ ಮಾಡಿಕೊಡುತ್ತಿದ್ದಳಂತೆ.
ಈ ನಡುವೆ ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ವೈಮನಸ್ಸು ಬೆಳೆದಿದ್ಯಂತೆ. ಹಣ ನೀಡುವಂತೆ ಶಿವಮ್ಮನನ್ನ ನಿಂಗಪ್ಪ ಪೀಡಿಸುತ್ತಿದ್ದನಂತೆ. ಈಗ ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕುತ್ತಿಗೆ ಹಿಸುಕಿ ಶಿವಮ್ಮಳನ್ನು ಕೊಲೆ ಮಾಡಿದ್ದಾನೆ.
ತನ್ನ ತಾಯಿ ಸತ್ತು ಬಿದ್ದಿದ್ದನ್ನು ೧೦ ವರ್ಷದ ಮಗ ಪವನ್ ಪ್ರಶ್ನಿಸಿದ್ದಾನೆ. ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆರೋಪಿ, ಬಾಲಕನನ್ನೂ ಕತ್ತು ಹಿಸುಗಕಿ, ಹಲ್ಲೆ ಮಾಡಿ ಸಾಯಿಸಿದ್ದಾನೆ. ಇವರಿಬ್ಬರ ಸಾವನ್ನು ಕಂಡಿದ್ದ ಪುಟ್ಟ ಮಗು ಸಿಂಚನಾಳನ್ನೂ ಅದೇ ರೀತಿ ಕೊಲೆ ಮಾಡಿದ್ದಾನೆ.
ಪೊಲೀಸರ ಬಲೆಗೆ ಬಿದ್ದ ಆರೋಪಿ
ನಂತರ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಮನೆಯಲ್ಲಿದ್ದ ಗ್ಯಾಸ್ ಲೀಕ್ ಆಗುವಂತೆ ಮಾಡಿದ್ದಾನೆ. ಬಳಿಕ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಇನ್ನೂ ಆಘಾತಕಾರಿ ವಿಚಾರ ಅಂದ್ರೆ ಶಿವಮ್ಮ ಶವದ ಮೇಲಿದ್ದ ತಾಳಿಯನ್ನೂ ಆರೋಪಿ ನಿಂಗಪ್ಪ ಕದ್ದುಕೊಂಡು, ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಪೆನ್ಶನ್ ಮೊಹಲ್ಲಾ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.








































































































































































































































































































































































































































































































































































































































































































































































































































































































































































































































































































































