May 30, 2026
#ಅಂತರರಾಷ್ಟ್ರೀಯ

ನೇಪಾಳದಲ್ಲಿ ಲಘು ಭೂಕಂಪ, 4.3 ತೀವ್ರತೆ ದಾಖಲು

ಕಠ್ಮಂಡು:
ನೇಪಾಳದಲ್ಲಿ 4.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ, ಭಾನುವಾರ ರಾತ್ರಿಯೇ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರವು ಮಾಹಿತಿ ನೀಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹೊಸ ವರ್ಷವನ್ನು ಸಂಭ್ರಮದಿAದ ಆಚರಿಸುತ್ತಿದ್ದ ಜನರು ಭಯಭೀತರಾದರು. ಹೊಸ ವರ್ಷ ಆಚರಿಸಲು ಜನರು ಅನೇಕ ಸ್ಥಳಗಳಲ್ಲಿ ಜಮಾಯಿಸಿದ್ದರು.
ಇದಕ್ಕೂ ಮುನ್ನ ನವೆಂಬರ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪ ಭಾರಿ ಹಾನಿಯನ್ನುಂಟು ಮಾಡಿತ್ತು. ನವೆಂಬರ್ ೩ ರಂದು ಪಶ್ಚಿಮ ನೇಪಾಳದ ಜಜರ್ಕೋಟ್ ಹಾಗೂ ರುಕುಮ್ ಪಶ್ಚಿಮ ಜಿಲ್ಲೆಗಳಲ್ಲಿ 6.4ತೀವ್ರತೆಯ ಭೂಕಂಪ ಸಂಭವಿಸಿತ್ತು.
ಇದರಿAದ 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅನೇಕ ಮಂದಿ ಗಾಯಗೊಂಡಿದ್ದರು. ಮೂರು ದಿನಗಳ ನಂತರ ಅಂದರೆ ನವೆಂಬರ್ 6 ರಂದು ಮತ್ತೆ ಭೂಕಂಪ ಸಂಭವಿಸಿತ್ತು. ನವೆಂಬರ್ 23 ರಂದು ನೇಪಾಳದ ಕಠ್ಮಂಡುವಿನಲ್ಲಿ ಭೂಕಂಪ ಸಂಭವಿಸಿತ್ತು, ಅದರ ತೀವ್ರತೆ 4.6ರಷ್ಟಿತ್ತು.
22 ಜಿಲ್ಲೆಗಳು ಅಪಾಯದ ವಲಯದಲ್ಲಿವೆ ನೇಪಾಳದಲ್ಲಿ ಕಾಲ ಕಾಲಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ, ೨೨ ಜಿಲ್ಲೆಗಳಲ್ಲಿ ಅಪಾಯದ ವಲಯ ಎಂದು ಗುರುತಿಸಲಾಗಿದೆ. ಬಜಾಂಗ್ ಜಿಲ್ಲೆಯನ್ನು ಸಹ ಒಳಗೊಂಡಿದೆ.

Leave a comment

Your email address will not be published. Required fields are marked *