ಟಿಕೆಟ್ ಘೋಷಣೆಗೂ ಮುನ್ನವೇ ಟವೆಲ್ ಹಾಕಿದ ಈಶ್ವರಪ್ಪ
ಶಿವಮೊಗ್ಗ:
ಲೋಕಸಭಾ ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ಈಗಾಗಲೇ ರಾಜಕಾರಣಿಗಳು ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೂಡ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿಯ ಲೋಕಸಭಾ ಟಿಕೆಟ್ ಘೋಷಣೆಗೂ ಮುನ್ನವೇ ತಮ್ಮ ಪುತ್ರನ ಪರ ಟವೆಲ್ ಹಾಕಿರುವ ಮಾಜಿ ಶಾಸಕ ಕೆಎಸ್ ಈಶ್ವರಪ್ಪ, ಹಾವೇರಿಯಲ್ಲಿ ಕಾಂತೇಶ್ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದು, ಈಗಾಗಲೇ ಕಾಂತೇಶ್ ಓಡಾಟ ಆರಂಭಿಸಿದ್ದಾರೆ ಎಂದು ಹೇಳಿದರು. ಈ ಸಂಬAಧ ಸುದ್ದಿಗಾರರ ಜೊತೆ ಶಿವಮೊಗ್ಗದಲ್ಲಿ ಮಾತನಾಡಿರುವ ಕೆಎಸ್ ಈಶ್ವರಪ್ಪ, ಹಾವೇರಿಯಲ್ಲಿ ಇರುವ ಎಲ್ಲರ ಅಪೇಕ್ಷೆಯ ಮೇರೆಗೆ ಕಾಂತೇಶ್ ಓಡಾಟ ಆರಂಭಿಸಿದ್ದಾರೆ. ಟಿಕೆಟ್ ಕೊಟ್ರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಅಷ್ಟೇ ಎಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆಯೂ ಮಾತನಾಡಿದ ಕೆಎಸ್ ಈಶ್ವರಪ್ಪ, ಈ ಬಜೆಟ್‌ನಿಂದ ಎಲ್ಲಾ ವರ್ಗದ ಜನರಿಗೂ ಲಾಭ ಆಗಿದೆ. ಈ ಬಜೆಟ್ ತುಂಬಾ ಸಂತೋಷ ತಂದಿದೆ. ಪ್ರವಾಸೋದ್ಯಮ ಇಲಾಖೆಗೆ ಹೆಚ್ಚು ಒತ್ತು ನೀಡಲಾಗಿದೆ. ಬಡ್ಡಿ ರಹಿತ ಸಾಲ ನೀಡ್ತಾ ಇರೋದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ಕೆಎಸ್ ಈಶ್ವರಪ್ಪ, ಈ ವಿಚಾರದಿಂದ ಬಹಳ ನೋವಾಗಿದೆ. ಪಾಕಿಸ್ತಾನದಲ್ಲಿ ನೆಮ್ಮದಿ ಇಲ್ದೆ ಜನರು ಬದುಕುತ್ತಿದ್ದಾರೆ. ದೇಶ ಹೊಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಜಿನ್ನಾ ಸಂಸ್ಕೃತಿಯನ್ನ ಡಿ.ಕೆ.ಸುರೇಶ್ ಅಳವಡಿಸಲು ಹೋಗಿದ್ದಾರೆ. ಎರಡು ರಾಷ್ಟ್ರ ಮಾಡಬೇಕೆಂಬ ಹೇಳಿಕೆ ನೀಡಿದ್ದಾರೆ. ಇದನ್ನ ಡಿ.ಕೆ.ಶಿವಕುಮಾರ್ ಸ್ವಾಗತ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ಒಪ್ಪಿಲ್ಲ, ಡಿ.ಕೆ.ಸುರೇಶ್ ಹೇಳಿಕೆಯನ್ನ ಕಾಂಗ್ರೆಸ್‌ನವರೇ ಒಪ್ಪಿಲ್ಲ. ಈ ವಿಚಾರದಿಂದ ಬಹಳ ನೋವಾಗಿದೆ ಎಂದರು.
ಸAಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಯನ್ನ ನಾನು ಸ್ವಾಗತ ಮಾಡುತ್ತೇನೆ ಎಂದ ಈಶ್ವರಪ್ಪ, ಇಡೀ ದೇಶದಲ್ಲಿ ನಾನು ಒಬ್ಬ ರಾಜಕಾರಣಿ ಬದುಕಿದ್ದೀನಿ ಅಂತಾ ತೋರಿಸಲು ಸುರೇಶ್ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನ ಉಗ್ರವಾಗಿ ಖಂಡಿಸುತ್ತೇನೆ. ಹಿಂದೂಸ್ಥಾನ ಮತ್ತು ಪಾಕಿಸ್ತಾನ ಹೊಡೆದಿದ್ದು ಇದೇ ಕಾಂಗ್ರೆಸ್‌ನವರು ಎಂದರು.
ಇನ್ನು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಖರ್ಗೆ ಹೃದಯದಲ್ಲಿ ಅರ್ಧ ಮೋದಿ, ಅರ್ಧ ರಾಮ ಇದ್ದಾನೆ. ಹಾಗಾಗಿ ಅವರು ದ್ವಂದ್ವ ನಿಲುವು ಹೊಂದಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿರುವುದು ಸಹಜ ಎಂದು ವ್ಯಂಗ್ಯವಾಡಿದರು.













































































































































































































































































































































































































































































































































































































































































































































































































































































































































































































































































































































