ಜೆಡಿಎಸ್-ಬಿಜೆಪಿ ರಾಜಕೀಯ ಲಾಭದ ಲೆಕ್ಕಚಾರಕ್ಕೆಕಾಂಗ್ರೆಸ್ ಪ್ರತ್ಯಾಸ್ತ್ರ!
ಮಂಡ್ಯ:
ನಿನ್ನೆ ಕೆರಗೋಡು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಲಾಯ್ತು. ಮಂಡ್ಯದ ಮಹಾವೀರ ಸರ್ಕಲ್‌ನಲ್ಲಿ ಲಘು ಲಾಠಿ ಪ್ರಹಾರ ನಡೆಸಲಾಯ್ತು.
ಇನ್ನು ಈ ಪ್ರತಿಭಟನೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೈತ್ರಿ ಗೆಳೆಯರಾದ ಜೆಡಿಎಸ್-ಬಿಜೆಪಿ ಈ ವಿಷಯವನ್ನು ಲೋಕಸಮರದವರೆಗೂ ಜೀವಂತವಾಗಿರಿಸಲು ಪ್ಲಾನ್ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.
ಇದೀಗ ಬಿಜೆಪಿ ಮತ್ತು ಜೆಡಿಎಸ್ ಧ್ವಜ ವಿವಾದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಹೊಸ ಪ್ಲಾನ್ ಮಾಡಿಕೊಂಡಿದೆ. ಇದೇ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿಕೊಂಡಿರುವ ಕಾಂಗ್ರೆಸ್ ಪಡೆ, ಮೈತ್ರಿ ಗೆಳೆಯರಿಗೆ ಶಾಕ್ ಕೊಡಲು ಪ್ಲಾನ್ ಮಾಡಿಕೊಂಡಿದೆಯAತೆ.
ಕಾAಗ್ರೆಸ್ ಪ್ಲಾನ್ ಏನು?
ಭಗವಾಧ್ವಜ ಅಸ್ತ್ರಕ್ಕೆ ದಲಿತಾಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆಯAತೆ. ನಮಗೂ ಅಂಬೇಡ್ಕರ್ ಪೋಟೋ ಇರೋ ಧ್ವಜಸ್ತಂಭಕ್ಕೆ ಅವಕಾಶ ನೀಡಿ ಎಂದು ದಲಿತ ಸಂಘಟನೆಗಳ ಹೋರಾಟಕ್ಕೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಮಂಡ್ಯದಲ್ಲಿ ಶಾಸಕ ಗಣಿಗ ರವಿ ಹೋದಲೆಲ್ಲ ರಾಷ್ಟ್ರಧ್ವಜ ವಿತರಣೆ ಅಭಿಯಾನ ಆರಂಭಿಸಲು ಕಾಂಗ್ರೆಸ್ ಸೂಚಿಸಿದೆಯಂತೆ. ಈ ಮೂಲಕ ರಾಷ್ಟ್ರೀಯತೆಯ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸಿದೆಯಂತೆ.
ಮAಡ್ಯದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಲೋಕಸಭಾ ಚುನಾವಣೆಗಾಗಿ ಕೋಮುಗಲಭೆ ಮಾಡುತ್ತಿದ್ದಾರೆ. ಜಿಲ್ಲೆಯ ಶಾಂತಿ, ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ರವಾನಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ ಎಂದು ಹೇಳಲಾಗಿದೆ
ಇನ್ನು ಪಾದಯಾತ್ರೆಗೆ ತಿರುಗೇಟು ನೀಡಲು ಮಂಡ್ಯ ಭಾಗದ ಶಾಸಕರು ಶಾಂತಿಯಾತ್ರೆಗೆ ನಿರ್ಧರಿಸಿದ್ದಾರಂತೆ. ಈ ಶಾಂತಿಯಾತ್ರೆ ಇಡೀ ಮಂಡ್ಯ ಜಿಲ್ಲೆಯಲ್ಲಿ ನಡೆಸುವ ಸಾಧ್ಯತೆಗಳಿವೆ.









































































































































































































































































































































































































































































































































































































































































































































































































































































































































































































































































































































