July 27, 2026
#ಚಲನಚಿತ್ರ

ಶೂಟಿಂಗ್ ವೇಳೆ ನಟ ಪೃಥ್ವಿರಾಜ್ ಗೆ ಗಂಭೀರ ಗಾಯ: ಸರ್ಜರಿಗೆ ಸೂಚನೆ

ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಶೂಟಿಂಗ್ ನಲ್ಲಿದ್ದ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ವಿಲಾಯತ್ ಬುದ್ದ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ವೈದ್ಯರು ಸೂಚನೆ ನೀಡಿದ್ದರು.ಅದರಂತೆ ಇಂದು ನಟ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ಮಲಯಾಳಂನ ನಿರೀಕ್ಷಿತ ವಿಲಾಯತ್ ಬುದ್ದ ಸಿನಿಮಾದಲ್ಲಿ ಸಾಕಷ್ಟು ಸಾಹಸ ಪ್ರಧಾನ ದೃಶ್ಯಗಳಿದ್ದು ಅವುಗಳ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಸುಕುಮಾರನ್ ಪೆಟ್ಟು ಮಾಡಿಕೊಂಡಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ನಟನಿಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದು ಹೀಗಾಗಿ ಸದ್ಯದ ಮಟ್ಟಿಗೆ ಚಿತ್ರೀಕರಣಕ್ಕೆ ಬ್ರೇಕ್ ಬೀಳಲಿದೆ.

ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ಹರಡುತ್ತಿದ್ದಂತೆಯೇ ಅವರ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ನಟನ ಆರೋಗ್ಯದ ಕುರಿತಾಗಿ ಅಪ್ ಡೇಟ್ ಪಡೆಯಲು ಕಾದಿದ್ದರು. ಆತಂಕ ಪಡುವಂಥದ್ದು ಏನೂ ಆಗಿಲ್ಲ. ಸಣ್ಣದೊಂದು ಸರ್ಜರಿ ಮಾಡಬೇಕಿದೆ ಎಂದು ವೈದ್ಯರು ಹೇಳಿದ ಬಳಿಕವೇ ಅಭಿಮಾನಿಗಳು ಅಲ್ಲಿಂದ ವಾಪಸ್ ಆಗಿದ್ದಾರೆ.

Leave a comment

Your email address will not be published. Required fields are marked *