September 12, 2026
#ಜಿಲ್ಲೆ

ಹಳ್ಳಿತಪ್ಪಿದ ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು

ಕೊಪ್ಪಳ: ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.

ರೈಲು ಯಶವಂತಪುರದಿಂದ ಕಾರಟಗಿ ನಿಲ್ದಾಣಕ್ಕೆ ಆಗಮಿಸುವ ವೇಳೆ ಘಟನೆ ನಡೆದಿದೆ. ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಸದ್ಯ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಹಳಿ ತಪ್ಪಿದರೂ ಯಾವುದೇ ಪ್ರಾಣಾಪಾಯವಾಗಿಲ್ಲ.

ರೈಲಿನ ಎಂಜಿನ್ ಸಂಪೂರ್ಣವಾಗಿ ಹಳ್ಳಿ ತಪ್ಪಿದ್ದು, ರೈಲ್ವೆ ನಿಲ್ದಾಣ ಸಮೀಪದಲ್ಲಿ ಅದರ ಬೋಗಿಗಳು ನಿಂತಿವೆ. ರೈಲ್ವೆ ಹಳಿ ತಪ್ಪಿದ್ದರಿಂದ 2 ರೈಲ್ವೆ ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. 

Leave a comment

Your email address will not be published. Required fields are marked *