ಸೋಮಣ್ಣ ಬಿಜೆಪಿ ಬಿಡಲ್ಲ, ಯತ್ನಾಳ್ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತೆ
ಬೆಂಗಳೂರು:
ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ಬಿಡಲ್ಲ. ಸೋಮಣ್ಣ ಅವರ ಜೊತೆ ದೂರವಾಣಿ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ ೪ ರಂದು ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವತ್ತು ಎಲ್ಲವೂ ದಿ ಎಂಡ್ ಆಗಲಿದೆ. ಅಲ್ಲದೇ ಯತ್ನಾಳ್ ಅಸಮಾಧಾನ ವಿಚಾರವನ್ನು ಹೈಕಮಾಂಡ್ ಅವರು ನೋಡಿಕೊಳ್ಳುತ್ತಾರೆ ಎಂದರು.
ಲೋಕಸಭೆ ಬಳಿಕ ಸಾಕಷ್ಟು ಬದಲಾವಣೆ ಆಗುತ್ತೆ. ಶಿಂಧೆ, ಪವಾರ್ ಇದ್ದಾರೆ. ಸರ್ಕಾರ ಇರಲ್ಲ ಎಂದು ಕುಮಾರಸ್ವಾಮಿ ಸಹ ಹೇಳಿದ್ದಾರೆ. ಅವರಿಗೂ ಹಲವು ಸಂಪರ್ಕ ಇದೆ. ಯಾರೋ ಜ್ಯೋತಿಷಿ ಸಹ ಈ ಸರ್ಕಾರ ಉಳಿಯಲ್ಲ, ಅಲ್ಲೋಲ ಕಲ್ಲೋಲ ಎಂದಿದ್ದಾರೆ. ಸರ್ಕಾರ ಎರಡು ಭಾಗ ಆಗುತ್ತೆ ಎಂದಿದ್ದಾರೆ. ಆದರೆ ನಾನು ಜ್ಯೋತಿಷ್ಯ ನಂಬಲ್ಲ. ಆದರೆ ನನಗೂ ಮಾಹಿತಿ ಇದೆ. ನಾನು ಎಲ್ಲಿ ಯಾವಾಗ ಹೇಳಬೇಕೋ ಆಗ ಹೇಳುವೆ. ಡಿಕೆಶಿ ಅವರೇ ಸುಳಿವು ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.













































































































































































































































































































































































































































































































































































































































































































































































































































































































































































































































































































































